Phonepe ಲೋನ್ ಸುಲಭವಾಗಿ ಹಣ ಪಡೆಯುವ ಡಿಜಿಟಲ್ ಮಾರ್ಗ
ಇಂದಿನ ಡಿಜಿಟಲ್ ಯುಗದಲ್ಲಿ ನಮ್ಮ ದಿನನಿತ್ಯದ ಜೀವನ ಶೈಲಿಯಲ್ಲಿ ಮೊಬೈಲ್ ಫೋನ್ ಮೇಲೆ ನಾವೆಲ್ಲರೂ ಅವಲಂಬಿತರವಾಗಿದೆ. ಹಣ ಕಳಿಸುವುದು, ಬಿಲ್ ಪಾವತಿ ಮಾಡುವುದು, ಶಾಪಿಂಗ್ ಮಾಡುವುದು, ಮೊಬೈಲ್ ರಿಚಾರ್ಜ್,ಬೈಕ್ ಕಂತು ಹೀಗೆ ಹಲವಾರು ಕೆಲಸಗಳನ್ನ ಎಲ್ಲಾ ಮೊಬೈಲ್ ಅಪ್ಲಿಕೇಶನ್ ಮೂಲಕವೇ ನಾವು ನಡೆಸುವಂತಹ ಕೆಲಸಗಳಾಗಿವೆ. ಇದೇ ರೀತಿಯಲ್ಲಿ ಹಣಕಾಸು ಕ್ಷೇತ್ರದಲ್ಲೂ ದೊಡ್ಡ ಬದಲಾವಣೆಗಳು ಕಂಡು ಬರುತ್ತಿವೆ. ಹಿಂದೆ ಸಾಲ ಪಡೆಯಲು ಬ್ಯಾಂಕುಗಳಿಗೆ ಹಲವಾರು ಬಾರಿ ನಡೆದುಕೊಂಡು ಹೋಗಬೇಕಾಗಿತ್ತು. ಎಷ್ಟು ಸಲ ಅಡ್ಡಾಡಿದರು ಸಾಲ ಸಿಗುವುದು ಕಷ್ಟದ ಕೆಲಸವಾಗಿತ್ತು. ಬ್ಯಾಂಕುಗಳಿಗೆ ಹೋದರು ಸಹ ಅಲ್ಲಿನ ಕೆಲವು ನಿಯಮಗಳನ್ನ ನಾವು ಪಾಲಿಸಲೇಬೇಕಾಗಿತ್ತು. ಹಲವಾರು ಬಾರಿ ಹೋಗಬೇಕು, ಅಲ್ಲಿನ ಫಾರಂ ಗಳನ್ನು ತುಂಬಬೇಕು, ಬ್ಯಾಂಕ್ ಅವರು ಕೇಳಿದ ದಾಖಲಾತಿಗಳನ್ನ ಲಗತಿಸಿ ಕೊಡಬೇಕಾಗಿತ್ತು. ಆದರೆ ಈಗ ಆ ದಿನಗಳು ನಿಧಾನವಾಗಿ ಕಡಿಮೆಯಾಗುತ್ತಾ ಡಿಜಿಟಲ್ ಮಾರ್ಗವಾಗಿ ಮಾರ್ಪಾಡುವಾಗುತ್ತಿವೆ.
ಈಗ ನಾವು ಬಳಸುವ ಮೊಬೈಲ್ ಫೋನ್ ದಿಂದ ಫೋನ್ ಅಪ್ಲಿಕೇಶನ್ ಮೂಲಕ ನಾವು ಸಾಲ ಪಡೆಯುವ ವ್ಯವಸ್ಥೆ ಸಾಮಾನ್ಯವಾಗಿದೆ. ಇಂಥ ಡಿಜಿಟಲ್ ಲೋನ್ ಪಾವತಿ ಅಪ್ಲಿಕೇಶನ್ಗಳನ್ನು ಪಡೆಯುವಲ್ಲಿ ಫೋನ್ ಪೇ ಪ್ರಮುಖ ಸ್ಥಾನವನ್ನು ಪಡೆದುಕೊಂಡಿದೆ. PhonePe ಈಗ ಕೇವಲ ಹಣ ವರ್ಗಾವಣೆ ಮತ್ತು ಬಿಲ್ ಪಾವತಿ ಮಾಡೋದಕ್ಕೆ ಮಾತ್ರ ಸೀಮಿತವಾಗಿಲ್ಲ. ಇದು ಗ್ರಾಹಕರಿಗೆ ಅತಿ ಅವಶ್ಯಕ ಇದ್ದವರಿಗೆ ಲೋನ್ ಕೊಡುವುದಕ್ಕೆ ಒದಗಿಸುವುದಕ್ಕೆ ಕೂಡ ಸಹಾಯಕವಾಗಿದೆ.
ಈ ಒಂದು ಆರ್ಟಿಕಲ್ ನಲ್ಲಿ ಫೋನ್ ಪೇ ಲೋನ್ ಎಂದರೇನು, ಈ ಲೋನ್ ಹೇಗೆ ಕೆಲಸ ಮಾಡುತ್ತದೆ, ಲೋನ್ ವಿಧಗಳು ಯಾವವು, ಇ ಲೋನ್ ಪಡೆಯುವುದಕ್ಕೆ ಅರ್ಹತೆಗಳೇನು?, ಲೋನ್ ಪಡೆಯುವ ವಿಧಾನ ಹೇಗೆ , ಲೋನ್ ಪಡೆದರು ಅದಕ್ಕೆ ಬರಿಸುವ ಬಡ್ಡಿದರ ಎಷ್ಟು, ಲಾಭ ನಷ್ಟಗಳ ಮತ್ತು ಗಮನಿಸಬೇಕಾದ ವಿಷಯವನ್ನು ಈ ಒಂದು ಆರ್ಟಿಕಲ್ ನಲ್ಲಿ ನಾವು ಸರಳವಾಗಿ ನಿಮಗೆ ತಿಳಿಸಿಕೊಡುತ್ತೇವೆ.
PhonePe ಲೋನ್ ಎಂದರೇನು?
PhonePe ಲೋನ್ ಎಂದರೆ PhonePe ಮೊಬೈಲ್ ಅಪ್ಲಿಕೇಶನ್ ಮೂಲಕ ನಾವು ಸಣ್ಣ ಹಾಗೂ ಮಧ್ಯಮ ಪ್ರಮಾಣದ ಹಣವನ್ನು ಸಾಲದ ರೂಪದಲ್ಲಿ ಡಿಜಿಟಲ್ ವ್ಯವಸ್ಥೆ ಮೂಲಕ ಸರಳವಾಗಿ ಪಡೆಯುವಂತಹ ಒಂದು ವ್ಯವಸ್ಥೆ. ಇಲ್ಲಿ ಒಂದು ಮುಖ್ಯ ವಿಷಯ ಗಮನಿಸಬೇಕು ನಾವು. PhonePe ಸ್ವತಹ ನೇರವಾಗಿ ಸಾಲವನ್ನು ನೀಡುವುದಿಲ್ಲ. ಬದಲಿಗೆ ಇತರ ಬ್ಯಾಂಕುಗಳ ಜೊತೆ ಸೇರಿ ಅಂದರೆ ಇತರೆ ಬ್ಯಾಂಕುಗಳು ಮತ್ತು NBFC (Non-Banking Financial Company ) ಗಳ ಜೊತೆ ಕೈಜೋಡಿಸಿ ತನ್ನ ಗ್ರಾಹಕರಿಗೆ PhonePe ಸಾಲವನ್ನು ನೀಡುತ್ತದೆ.
PhonePe ಲೋನ್ ಗಳ ವಿಧಗಳು
PhonePe ಅಪ್ಲಿಕೇಶನ್ ನಲ್ಲಿ ಬಳಕೆದಾರರ ಪ್ರೊಫೈಲ್ ಮತ್ತು ಅವರ ಅರ್ಹತೆಯ ಆಧಾರದ ಮೇಲೆ ವಿವಿಧ ರೀತಿಯ ಲೋನ್ ಗಳು ಲಭ್ಯವಾಗುತ್ತದೆ.
- ಪರ್ಸನಲ್ ಲೋನ್ (Personal Loan)
- ಶಾರ್ಟ್ ಟರ್ಮ್ ಲೋನ್ (Short Term Loan)
- ಕ್ರೆಡಿಟ್ ಲೈನ್/ಲೋನ್ ಆನ್ ವಾಲೆಟ್
- ಬಿಜಿನೆಸ್ ಲೋನ್
1.ಪರ್ಸನಲ್ ಲೋನ್ (Personal Loan)
- ಈ ಲೋನ್ ವೈಯಕ್ತಿಕ ಅಗತ್ಯಗಳಿಗಾಗಿ ಇದನ್ನ ಬಳಸಬಹುದಾಗಿದೆ.
- ಮದುವೆ ಖರ್ಚಿಗಾಗಿ
- ವೈದ್ಯಕೀಯ ಚಿಕಿತ್ಸೆಗಾಗಿ
- ಶಿಕ್ಷಣ ಶುಲ್ಕ ಪಾವತಿಸಲು
- ಪ್ರವಾಸ ಬೆಚ್ಚ ಬರಿಸಲು
2.•ಶಾರ್ಟ್ ಟರ್ಮ್ ಲೋನ್ (Short Term Loan)
- ತುರ್ತು ಹಣಕಾಸು ಅಗತ್ಯಗಳಿಗಾಗಿ
- ಇದು ಕಡಿಮೆ ಅವಧಿಗೆ ನೀಡುವಂತಹ ಸಣ್ಣ ಪ್ರಮಾಣದ ಸಣ್ಣ ಮೊತ್ತದ ಸಾಲ.
ತುರ್ತು ಪರಿಸ್ಥಿತಿಯಲ್ಲಿ ತಕ್ಷಣಕ್ಕೆ ಹಣ ಬೇಕಾದರೆ ಇದನ್ನು ಉಪಯೋಗಿಸಬಹುದು.
3.•ಕ್ರೆಡಿಟ್ ಲೈನ್/ಲೋನ್ ಆನ್ ವಾಲೆಟ್
- ಈ ಲೋನ್ ನಲ್ಲಿ ನಿಮ್ಮ ಖರ್ಚಿಗೆ ತಕ್ಕಂತೆ ಒಂದು ಹಣದ ಮಿತಿಯನ್ನು (Limit) ನಿಗದಿ ಮಾಡಲಾಗಿರುತ್ತದೆ.
- ನಿಮಗೆ ಅಗತ್ಯವಿದ್ದಾಗ ಮಾತ್ರ ಈ ಹಣವನ್ನ ನೀವು ಬಳಸಬಹುದು.
- ಬಳಸಿದ ಮೊತ್ತಕ್ಕೆ ಮಾತ್ರ ಇಲ್ಲಿ ಬಡ್ಡಿಯನ್ನ ತೆಗೆದುಕೊಳ್ಳುತ್ತಾರೆ.
4.ಬಿಜಿನೆಸ್ ಲೋನ್
- ಸಣ್ಣ ಪ್ರಮಾಣದ ವ್ಯಾಪಾರಿಗಳು ಮತ್ತು ಸ್ವಯಂ ಉದ್ಯೋಗಿಗಳಿಗೆ ಈ ಲೋನ್ ಅನ್ನಾ ನೀಡಲಾಗುತ್ತದೆ.
- ವ್ಯಾಪಾರ ಅಭಿವೃದ್ಧಿಗೊಳಿಸಲು, ಸಣ್ಣ ಪ್ರಮಾಣದ ಸರಕು ಖರೀದಿ ಮಾಡಲು & ಕಾರ್ಯಕ್ರಮದ ಖರ್ಚಿಗೆ ಈ ಲೋನ್ ಬಳಸಬಹುದು
ಗಮನಿಸಿ: ಎಲ್ಲಾ ಬಳಕೆದಾರರಿಗೆ ಎಲ್ಲಾ ರೀತಿಯ ಲೋನ್ ಆಯ್ಕೆಗಳು ಲಭ್ಯವಿರುವುದಿಲ್ಲ.
PhonePe ಲೋನ್ ಪಡೆಯಲು ಅರ್ಹತೆ (Eligibility)
PhonePe ಲೋನ್ ಪಡೆಯಲು ಸಾಮಾನ್ಯವಾಗಿ ಈ ಕೆಳಗಿನ ಅರ್ಹತೆಗಳು ಹೊಂದಿರಲೇ ಬೇಕಾಗುತ್ತದೆ.
- ಕಡ್ಡಾಯವಾಗಿ ವಯಸ್ಸು 21ರಿಂದ 60 ವರ್ಷ
- ಭಾರತೀಯ ನಾಗರಿಕರಾಗಿರಬೇಕು
- ಪ್ಯಾನ್ ಕಾರ್ಡ್ ಹೊಂದಿರಬೇಕು
- ಆಧಾರ್ ಕಾರ್ಡ್ ಹೊಂದಿರಬೇಕು
- ಸಕ್ರಿಯ ಬ್ಯಾಂಕ್ ಖಾತೆ ಇರಬೇಕು
- ಉತ್ತಮ ಕ್ರೆಡಿಟ್ ಸ್ಕೋರ್ (CIBIL Score)
- PhonePe ಅಪ್ಲಿಕೇಶನ್ ಅನ್ನು ನಿರಂತರವಾಗಿ ಬಳಸಬೇಕು
PhonePe ಲೋನ್ ಪಡೆಯುವುದು ಹೇಗೆ? PhonePe ಲೋಡ್ ಪಡೆಯುವ ಪ್ರಕ್ರಿಯೆ ತುಂಬಾ ಸರಳವಾಗಿದೆ ಹಾಗೆ ಅತಿ ವೇಗವಾಗಿದೆ.
ಹಂತ 1: PhonePe ಅಪ್ಲಿಕೇಶನ್ ತೆರೆಯಿರಿ
ನಿಮ್ಮ ಮೊಬೈಲ್ ಫೋನ್ನಲ್ಲಿ PhonePe ಅಪ್ಲಿಕೇಶನ್ ಓಪನ್ ಮಾಡಿ
ಹಂತ 2 : Loan ವಿಭಾಗಕ್ಕೆ ಹೋಗಿ
ಅಪ್ಲಿಕೇಶನ್ ನಲ್ಲಿ Loan , Credits ಅಥವಾ Offes ವಿಭಾಗವನ್ನು ಹುಡುಕಿ.
ಹಂತ 3 : ನಿಮಗೆ ಲಭ್ಯವಿರುವ ಲೋನ್ ಆಯ್ಕೆ ಮಾಡಿ
ಆ ಸೆಕ್ಷನ್ನಲ್ಲಿ ನಿಮಗೆ ಲಭ್ಯವಿರುವ ಲೋನ್ ಕಾಣಿಸುತ್ತದೆ.
ಹಂತ 4 : ಲೋನ್ ವಿವರಗಳನ್ನು ಒಮ್ಮೆ ಪರಿಶೀಲಿಸಿ
- ಲೋನ್ ಮೊತ್ತ
- ಬಡ್ಡಿದರ
- ಅವಧಿ
- EMI ಮೊತ್ತ
ಹಂತ 5 : KYC ಪ್ರಕ್ರಿಯೆ ಪೂರ್ಣಗೊಳಿಸಿ
ನಿಮ್ಮ ಪಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಮೂಲಕ e-kyc ಮಾಡಬೇಕು.
ಕೆಲವೊಮ್ಮೆ ಸೆಲ್ಫಿ ವಿಡಿಯೋ ಅಥವಾ OTO (One Time Password) ಕೇಳಬಹುದು
ಹಂತ 6 : ಲೋನ್ Approval
ಅರ್ಜಿ ಸಲ್ಲಿಸಿದ ನಂತರ ಕೆಲವೇ ನಿಮಿಷಗಳಲ್ಲಿ ಲೋನ್ ಅಪ್ರೂವ್ ಆಗಬಹುದು.
ಹಂತ 7: ಹಣ ಜಮಾ
ಅಪ್ರುವಲ್ ಆದ ಕೆಲವೇ ಕೆಲವು ನಿಮಿಷಗಳಲ್ಲಿ ಲೋನ್ ಹಣ ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಆಗಿರುತ್ತದೆ.
PhonePe ಲೋನ್ ಬಡ್ಡಿದರ (Interest Rate)
- 12% ರಿಂದ 30% ವಾರ್ಷಿಕ ಬಡ್ಡಿದರ (APR)
- ಬಡ್ಡಿದರವು ನಿಮ್ಮ ಕ್ರೆಡಿಟ್ ಸ್ಕೋರ್, ಲೋನ್ ಮೊತ್ತ ಮತ್ತು ಅವಧಿಯ ಮೇಲೆ ಅವಲಂಬಿತವಾಗಿರುತ್ತದೆ.
- ಶಾರ್ಟ್ ಟರ್ಮ್ ಲೋನ್ ಗಳಲ್ಲಿ ಬಡ್ಡಿದರ ಸ್ವಲ್ಪ ಮಟ್ಟಿಗೆ ಜಾಸ್ತಿ ಇರಬಹುದು.
ಲೋನ್ ಮರುಪಾವತಿ (Repayment)
- ಲೋನ್ ಅನ್ನು EMI ಮೂಲಕ ಮರುಪಾವತಿ ಮಾಡಬಹುದಾಗಿದೆ.
- PhonePe ಅಪ್ಲಿಕೇಶನ್ ನಿಂದಲೇ EMI ಕಟ್ಟಬಹುದು
- ಸಮಯಕ್ಕೆ ಸರಿಯಾಗಿ ನೀವು EMI ಕಟ್ಟಬೇಕು ಎನ್ನುವುದು ಬಹಳ ಮುಖ್ಯ
ಒಂದು ವೇಳೆ ಹಣ ಕಟ್ಟುವುದು ತಡವಾದರೆ
- ಫಿನಾಲ್ಟಿ ಶುಲ್ಕ ವಿಧಿಸಲಾಗುತ್ತದೆ
- ನಿಮ್ಮ ಕ್ರೆಡಿಟ್ ಸ್ಕೋರ್ ಗೆ ಹಾನಿಯಾಗುತ್ತದೆ
PhonePe ಲೋನ್ ಲಾಭಗಳೇನು?
- ಸಂಪೂರ್ಣ ಡಿಜಿಟಲ್ ಪ್ರಕ್ರಿಯೆ
- ಬ್ಯಾಂಕಿಗೆ ಹೋಗುವ ಕೆಲಸ ಇರುವುದಿಲ್ಲ
- ವೇಗವಾದ ಅಪ್ರುವಲ್
- ಕಡಿಮೆ ದಾಖಲೆಗಳು
- 24/7 ಲಭ್ಯತೆ
- ಸಣ್ಣ ಮೊತ್ತಕ್ಕೂ ಲೋನ್ ಸೌಲಭ್ಯ
PhonePe ಲೋನ್ ನಿಂದ ಆಗುವ ನಷ್ಟಗಳ
- ಬಡ್ಡಿದರ ಸ್ವಲ್ಪ ಹೆಚ್ಚು
- ಎಲ್ಲರಿಗೂ ಲಭ್ಯವಿಲ್ಲ
- ತಡಪಾವತಿಗೆ ಹೆಚ್ಚಿನ ತಂಡ ವಿಧಿಸಲಾಗುತ್ತದೆ
- ಅತಿಯಾದ ಸಾಲ ತೆಗೆದುಕೊಳ್ಳುವ ಅಪಾಯ
PhonePe ಲೋನ್ ಬಳಸುವಾಗ ನೀವು ಗಮನಿಸಬೇಕಾದ ವಿಷಯಗಳು
- ನಿಮಗೆ ಲೋನ್ ನಿಜವಾಗಿಯೂ ಅಗತ್ಯವಿದೆಯಾ ಎನ್ನುವುದನ್ನು ಮೊದಲು ಯೋಚಿಸಿ
- ಬಡ್ಡಿದರ ಮತ್ತು ಇತರ ಶುಲ್ಕಗಳನ್ನ ಚೆನ್ನಾಗಿ ಓದಿ ತಿಳಿದುಕೊಳ್ಳಿ
- EMI ಪಾವತಿಸಲು ಸಾಧ್ಯವಿದೆಯೇ ಎಂದು ಪರಿಶೀಲಿಸಿ
- ಸಮಯಕ್ಕೆ ಸರಿಯಾಗಿ EMI ಪಾವತಿ ಮಾಡಬೇಕು
- ಅನಗತ್ಯ ಸಾಲ ತೆಗೆದುಕೊಳ್ಳಬೇಡಿ
PhonePe ಲೋನ್ ಸುರಕ್ಷಿತವೇ?
ಹೌದು ಫೋನ್ ಪೇ ಆರ್ ಬಿ ಐ ಮಾರ್ಗಸೂಚಿಗಳ ಪ್ರಕಾರ ತನ್ನ ಕಾರ್ಯವನ್ನು ನಿರ್ವಹಿಸುತ್ತದೆ. ಇದು ನಂಬಿಗಸ್ತ ಬ್ಯಾಂಕ್ ಮತ್ತು NBFC (Non-Banking Financial Company ) ಗಳ ಜೊತೆಗೂಡಿ ಗ್ರಾಹಕರಿಗೆ ಸೇವೆಯನ್ನು ಒದಗಿಸುತ್ತದೆ. ಬಳಕೆದಾರರು ತಮ್ಮ ವೈಯಕ್ತಿಕ ಮಾಹಿತಿ ಮತ್ತು OTP ಗಳನ್ನ ಯಾರಿಗೂ ಹಂಚಿಕೊಳ್ಳಬಾರದು.
PhonePe ಲೋನ್ ಯಾರಿಗೆ ಹೆಚ್ಚು ಉಪಯುಕ್ತ?
PhonePe ಲೋನ್ ವಿಶೇಷವಾಗಿ ತುರ್ತು ಹಣಕಾಸು ಅಗತ್ಯ ಎದುರಿಸುತ್ತಿರುವವರಿಗೆ ಹೆಚ್ಚು ಉಪಯುಕ್ತವಾಗಿದೆ. ಉದಾಹರಣೆಗೆ, ಅಚಾನಕ್ ವೈದ್ಯಕೀಯ ವೆಚ್ಚ ಭರಿಸುವ ಅವಶ್ಯಕತೆ ಎದುರಾದಾಗ ಇದು ನಮಗೆ ಅತಿ ಅವಶ್ಯಕ ಆಗ ಬಹುದು , ಕೆಲವೊಂದು ಸಮಯದಲ್ಲಿ ಬ್ಯಾಂಕ್ ರಜಾ ದಿನಗಳಲ್ಲಿ ಈ ಸೌಲಬ್ಯ ಬಹಳ ಅನೂಕೂಲವಾಗಬಹುದು, ಮನೆ ದುರಸ್ತಿ ಮಾಡಲು ಇದು ಅವಶ್ಯಕ , ಮಕ್ಕಳ ಶಿಕ್ಷಣ ಶುಲ್ಕ ಪಾವತಿಸಲು ಅಥವಾ ತಿಂಗಳ ಕೊನೆಯ ದಿನಗಳಲ್ಲಿ ಹಣದ ಕೊರತೆ ಎದುರಾದಾಗ ಈ ಲೋನ್ ಸಹಾಯವಾಗುತ್ತದೆ. ಬ್ಯಾಂಕ್ ಸಾಲಕ್ಕೆ ಹೋಲಿಸಿದರೆ ಇಲ್ಲಿ ಪ್ರಕ್ರಿಯೆ ತುಂಬಾ ವೇಗವಾಗಿದ್ದು ಅತಿ ಕಡಿಮೆ ಸಮಯದಲ್ಲಿ ನಮಗೆ ಸಾಲ ದೊರೆಯುತ್ತದೆ , ದಾಖಲೆಗಳ ಅಗತ್ಯವೂ ಕಡಿಮೆ. ಸ್ಮಾರ್ಟ್ಫೋನ್ ಬಳಸುವ ಯುವಕರು ಹೆಚ್ಚು , ಉದ್ಯೋಗಿಗಳು ಮತ್ತು ಸಣ್ಣ ವ್ಯಾಪಾರಿಗಳು PhonePe ಲೋನ್ ಅನ್ನು ಸುಲಭವಾಗಿ ಬಳಸಬಹುದು. ಆದರೆ, ಇದನ್ನು ಶಾಶ್ವತ ಪರಿಹಾರವಾಗಿ ನೋಡದೆ, ಕೇವಲ ತಾತ್ಕಾಲಿಕ ಅಗತ್ಯಗಳಿಗೆ ಮಾತ್ರ ಬಳಸುವುದು ಉತ್ತಮ. ಜವಾಬ್ದಾರಿಯುತ ಬಳಕೆ ಮಾಡಿದರೆ PhonePe ಲೋನ್ ನಿಮ್ಮ ಹಣಕಾಸು ನಿರ್ವಹಣೆಗೆ ಒಳ್ಳೆಯ ಬೆಂಬಲವಾಗುತ್ತದೆ.
ಹಾಗೆ ಇದೇ ರೀತಿ ನಿಮ್ಮ ಜೀವನಕ್ಕೆ ಉಪಯೋಗ ವಾಗುವ ಅವಶ್ಯಕ ಮಾಹಿತಿಗನ್ನ ಪಡೆಯೋಕೆ ನಮ್ಮ WhatsApp Group ಗೆ ಜಾಯಿನ್ ಆಗಿ ಕೆಳಗಡೆ ಇರುವ WhatsApp Group ಎಂಬ ಬಟನ್ ಒತ್ತಿ ಜಾಯಿನ್ ಆಗಿ.
WhatsApp Group