ಗಿಲ್ಲಿ ಗೆಲ್ಲೋದೆ ಡೌಟ್..ಅಶ್ವಿನಿ ಗೌಡ ಧ್ರುವಂತ್ ಗೆ ಮೇಲುಗೈ
ಇದೀಗ ಬಿಗ್ ಬಾಸ್ ಕನ್ನಡ ಸೀಸನ್ 12ರ ಮನೆಯು ನೂರು ದಿನಗಳನ್ನು ಪೂರೈಸಿದೆ. ಆರಂಭದಿಂದಲೂ ವಿವಾದ,ವೈಮನಸ್ಸು,ಸ್ನೇಹ,ತಂತ್ರ ಭಾವನೆಗಳ ಮಿಶ್ರಣದಿಂದ ಸಾಗಿದೆ.ಈ ಸೀಸನ್ ಕೊನೆಯ ಹಂತಕ್ಕೆ ಬಂದು ತಲುಪಿದೆ.ಮುಂದಿನ ವಾರವೇ ನಡೆಯಲಿರುವ ಗ್ರ್ಯಾಂಡ್ ಫಿನಾಲೆ ಗಾಗಿ ಪ್ರೇಕ್ಷಕರು ತೀವ್ರ ಕುತೂಹಲದಿಂದ ಕಾತುರದಿಂದ ಕಾಯ್ತಿದ್ದಾರೆ.ಯಾರು ಟೋಪಿ ಎತ್ತಲಿದ್ದಾರೆಯೇ?ಇ ಬಾರಿ ಈ ಸೀಸನ್ ನಲ್ಲಿ ಯಾರು ರನ್ನರ್-ಅಪ್ ಆಗುತ್ತಾರೆ? ಎಂಬ ಪ್ರಶ್ನೆಗಳು ಈಗಲೂ ಬಿಗ್ ಬಾಸ್ ಪ್ರೇಕ್ಷಕರಲ್ಲಿ ಮೂಡಿದ ಪ್ರಶ್ನೆಗಳಾಗಿವೆ.
ಗಿಲ್ಲಿ ಗೆಲುವಿನ ನಿರೀಕ್ಷೆ -ಆದರೆ ಅನುಮಾನ ಸಹ ಇದೆ.
ಇ ಸೀಸನ್ ಮೊದಲಿನಿಂದಲೂ ಗಿಲ್ಲಿ ನಟ ಒಬ್ಬ ಸ್ಟ್ರಾಂಗ್ ಕಂಟೆಸ್ಟಂಟ್ ಹಾಗೂ ಒಬ್ಬ ಒಳ್ಳೆಯ ಕಾಮಿಡಿಯನ ಕೂಡ ಹೌದು. ಬಿಗ್ ಬಾಸ್ ಸೀಸನ್ 12 ಬೇಜಾರಾಗದಂತೆ ಇಲ್ಲಿವರೆಗೂ ಸಾಗಿ ಬಂದಿದೆ ಅಂದ್ರೆ ಅದು ಮೂಲ ಕಾರಣ ಗಿಲ್ಲಿನೆ.ಗಿಲ್ಲಿ ಒಬ್ಬ ಸಾದಾರಣ ಕಾಮಿಡಿಯನ್ ಅಷ್ಟೇ ಅಲ್ಲಾ..ಎಲ್ಲರನ್ನ ಸಹ ತನ್ನತ್ತ್ ಸೆಳೆಯುವ ಮನಸ್ಥಿತಿ ಉಳ್ಳವನು. ಗಿಲ್ಲಿ ಅಂದ್ರೆ ಚಿಕ್ಕ ಹುಡುಗರಿಂದ-ಹದಿ ಹರಿಯದ ಅಜ್ಜ ಅಜ್ಜಿಯರಿಗೆ ಅಚ್ಚು ಮೆಚ್ಚು ನಮ್ಮ ಗಿಲ್ಲಿ.ಗಿಲ್ಲಿ ಒಳಗೆ ಅವನ ಆಟದ ಶೈಲಿ ,ಟಾಸ್ಕ್ ಗಳಲ್ಲಿ ತಾನು ತೋರಿದ ಪರ್ಫಾರ್ಮೆನ್ಸ್ ಅಷ್ಟೇ ಅಲ್ಲದೆ ಸ್ಪಷ್ಟವಾದ ನೇರ ನುಡಿ,ಸ್ಪಷ್ಟವಾದ ಅಭಿಪ್ರಾಯಗಳನ್ನ ಹೇಳುವುದರಲ್ಲಿ ಹಾಗೂ ದೈರ್ಯದಿಂದ ಮಾತಾಡುವ ಮಾತುಗಳಿಂದ ಹೊರಗಡೆ ಅವರಿಗೆ ದೊಡ್ಡ ಅಭಿಮಾನಿ ಬಳಗವನ್ನೇ ಹೊಂದಿದ್ದಾರೆ ನಟ ಗಿಲ್ಲಿ. ಸೋಶಿಯಲ್ ಮೀಡಿಯಾ ತುಂಬಾ ಬೇರೆ ಲೆವೆಲ್ ಅಲ್ಲಿ ಸಾಗುತ್ತಿದೆ ಗಿಲ್ಲಿ ಹವಾ. ಸೋಶಿಯಲ್ ಮೀಡಿಯಾದಲ್ಲಿ “ಗಿಲ್ಲಿಯೇ ವಿನ್ನರ್” ಎನ್ನುವ ಮಾತುಗಳು ಹೆಚ್ಚಾಗಿದ್ದವು.
ಆದರೆ ಈಗ ಆಟದ ಚಿತ್ರಣ ಸ್ವಲ್ಪ ಬದಲಾಗಿದೆ. ಫಿನಾಲೆಗೆ ಹತ್ತಿರವಾಗುತ್ತಿದ್ದಂತೆ ಬೇರೆ ಬೇರೆ ಸ್ಪರ್ದಿಗಳು ಸಹ ಅಚ್ಚರಿಯ ಪ್ರದರ್ಶನ ನೀಡುತ್ತಿದ್ದಾರೆ. ಇದರಿಂದ “ಗಿಲ್ಲಿ ಗೆಲುವು ಖಚಿತವೇ?” ಎನ್ನುವ ಅನುಮಾನವೂ ಕೆಲವರಿಗೆ ಶುರುವಾಗಿದೆ. ಬಿಗ್ ಬಾಸ್ ಮನೆಯಲ್ಲಿ ಕೊನೆಯ ವಾರಗಳು ಎಂದರೆ ಆಟವೆ ಬೇರೆ ಲೇವಲ್ ಗೆ ಹೋಗುತ್ತದೆ.ಇಲ್ಲಿ ಇ ಸಮಯದಲ್ಲಿ ಮಾಡುವ ಒಂದು ತಪ್ಪು ಸಹ ಫಲಿತಾಂಶವನ್ನೇ ಬದಲಾಯಿಸಬಲ್ಲದು.
ಇ ವಾರದ ಅಚ್ಚರಿ ಸ್ಟಾರ್ ಅಂದ್ರೆ ಅದು ಅಶ್ವಿನಿ ಗೌಡ
ಇ ವಾರದ ಆಟ ನೋಡಿದ್ರೆ ಸ್ಪಷ್ಟವಾಗಿ ಹೇಳಬಹುದು, ಅಶ್ವಿನಿ ಗೌಡ ತಮ್ಮ ಪರಿಶ್ರಮದಿಂದ ಬಾರಿ ಕಮ್ ಬ್ಯಾಕ್ ಮಾಡಿದ್ದಾರೆ. ಆರಂಭದಲ್ಲಿ ಅಶ್ವಿನಿ ಗೌಡ ನೇರ ನುಡಿ, ವಿವಾದ, ಗಿಲ್ಲಿ ಕಾವ್ಯ ಜೊತೆಗಿನ ಘರ್ಷಣೆ ಹೀಗೆ ಹಲವಾರು ರೀತಿಯಿಂದ ಅಶ್ವಿನಿ ಗೌಡ ಸೀಸನ್ ಆರಂಭದ ಸಮಯದಲ್ಲಿ ಗಮನ ಸೆಳೆದಿದ್ದರೂ. ಹಾಗೆ ಹೊರಗಡೆ ಅವರಿಗೆ ಸಪೋರ್ಟ್ ಮಾಡುವವರಿಗಿಂತ ಅವರನ್ನ ಪ್ರೀತಿಯಿಂದ ನೋಡದವರೇ ಹೆಚ್ಚಾಗಿದ್ದರು. ಇದಕ್ಕೆ ಕಾರಣ ಅವರ ಬಿಗ್ ಬಾಸ್ ಸೀಸನ್ 12 ರ ಮನೆಯೊಳಗೇ ನಡೆದುಕೊಂಡ ರೀತಿಯಿಂದಾಗಿ, ನಂತರ ಜಾನ್ವಿ ಎಲಿಮಿನೇಟ್ ಆಗಿ ಬಿಗ್ ಬಾಸ್ ಮನೆಯಿಂದ ಹೊರಗೆ ಬಂದ ಮೇಲೆ ಅಶ್ವಿನಿ ಗೌಡ ತುಂಬಾ ಸೈಲೆಂಟ್ ಆಗಿ ಒಂದು ಮೂಲೆ ಸೇರಿದ್ದರು. ಸೀಸನ್ ಮುಗಿಯುವ ಹಂತಕ್ಕೆ ಬರುತ್ತಿದ್ದಂತೆ ಈಗ ಅಶ್ವಿನಿ ಗೌಡ ಸ್ಟ್ರಾಂಗ್ ಕಮ್ ಬ್ಯಾಕ್ ಮಾಡಿದ್ದಾರೆ. ಇ ವಾರ 2 vs 6 ಆಗಿತ್ತು, ಬಿಗ್ ಬಾಸ್ ಮನೆಯಲ್ಲಿ ಆದರೂ ಅದನ್ನು ಲೆಕ್ಕಿಸದೆ ಅಶ್ವಿನಿ ಗೌಡ ಮುನ್ನುಗ್ಗಿ ತಮ್ಮ ಹಠದಿಂದ ಸ್ಟ್ರಾಂಗ್ ಕಮ್ ಬ್ಯಾಕ್ ಮಾಡಿದ್ದಾರೆ. ಇತ್ತೀಚಿನ ಟಾಸ್ಕ್ಗಳಲ್ಲಿ ಅವರು ತೋರಿದ ಆತ್ಮವಿಶ್ವಾಸ, ಸ್ಪಷ್ಟ ಚಿಂತನೆ ಹಾಗೂ ಧೈರ್ಯ ತುಂಬಾ ಮೆಚ್ಚುಗೆ ಪಡೆದಿದೆ.
ಅಶ್ವಿನಿ ಗೌಡ ಅವರ ಗ್ರಾಫ್ ಹೇಗಿದೆ
- ಟಾಸ್ಕ್ಗಳಲ್ಲಿ ಶೇ.100 ಶ್ರಮ ಹಾಕುತ್ತಿದ್ದಾರೆ.
- ಯಾರಿಗೂ ಬಗ್ಗದಂತೆ ನೇರವಾಗಿ ಮಾತನಾಡುತ್ತಿದ್ದಾರೆ
- ಅನಾವಶ್ಯಕ ಜಗಳದಿಂದ ದೂರವಿದ್ದು ಆಟದ ಮೇಲೆ ಗಮನ ಹರಿಸಿದ್ದಾರೆ
ಇವೆಲ್ಲಾ ಕಾರಣದಿಂದ ಅಶ್ವಿನಿ ಗೌಡ ಹೊರಗಿನ ಜನರ ಹಾಗೂ ಪ್ರಕ್ಷಕರ ಮನಸನ್ನ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಅಶ್ವಿನಿ ಗೌಡ ಫಿನಾಲೆಗೆ ಪಕ್ಕಾ” ಎನ್ನುವ ಮಾತುಗಳು ಈಗ ಕೇಳಿಬರುತ್ತಿವೆ.
ಧನುಷ್ ಧೃವಂತ ಸಹ ತಮ್ಮ ಆಟದಲ್ಲಿ ಮೇಲುಗೈ?
ಹೌದು ಬಿಗ್ ಬಾಸ್ ಆರಂಬದಿಂದಲೂ ಧನುಷ್ ಹಾಗೂ ಧೃವಂತ ನಿದಾನವಾಗಿ ಆಮೆ ನಡಿಗೆಯಂತೆ ಬಿಗ್ ಬಾಸ್ ಪ್ರಯಾಣ ಮಾಡುತ್ತಿದ್ದರು.ಬಿಗ್ ಬಾಸ್ ಮನೆಯಲ್ಲಿ ಧನುಷ್ ಅಂತರು ಹೆಚ್ಚು ಜಗಳವಿಲ್ಲ, ಹೆಚ್ಚು ಮಾತು ಇಲ್ಲಾ, ಯಾರ ಜಗಳದಲ್ಲೂ ಸ್ಟಾಂಡ್ ತೆಗೆದುಕೊಳ್ಳುತ್ತಿದ್ದಿಲ್ಲಾ.ಆದರೆ ಧೃವಂತ ಹಾಗಲ್ಲ ಬಿಗ್ ಬಾಸ್ ಆರಂಭದಿಂದಲೂ ತನ್ನ ನಿಲುವನ್ನ ತೆಗೆದುಕೊಂಡಿದ್ದಾರೆ ಅಸಭ್ಯ ವರ್ತನೆಗಳು, ಜಗಳದಲ್ಲಿ ಅತೀ ರೇಖಕ್ಕೆ ಹೋಗೋದು, ಮಾತಿನಲ್ಲಿ ಸ್ಪಷ್ಟತೆ ಇರಲಿಲ್ಲ, ಹಾಗೆ ಕೇವಲ ರಕ್ಷಿತಾ ಅವರನ್ನ ಬಿಗ್ ಬಾಸ್ ಮನೆಯಲ್ಲಿ ಧೃವಂತ ಟಾರ್ಗೆಟ್ ಮಾಡಿರುವ ರೀತಿ ಕಾಣಿಸುತ್ತಾ ಇತ್ತು. ಯಾವಾಗ ಧೃವಂತ ಸೀಕ್ರೆಟ್ ರೂಮ್ ಗೆ ಹೋಗಿ ಬಂದರೋ ಅವಾಗಿಂದ ಯಾರು ಹೇಗೆ ಎಂದು ತಿಳಿದುಕೊಂಡು ಬಿಗ್ ಬಾಸ್ ಆಟವಣ್ಣ ಸರಿಯಾಗಿ ಅರ್ಥ ಮಾಡಿಕೊಂಡು ಧೃವಂತ ಆಟವಾಡುತ್ತಿದ್ದಾರೆ.
ಈ ವಾರ ಧೃವಂತ ಧನುಷ್ ಆಟ :
- ಟಾಸ್ಕ್ಗಳಲ್ಲಿ ಲಾಜಿಕ್ ಮತ್ತು ಸ್ಟ್ರಾಟಜಿ ಬಳಸಿದ್ದಾರೆ.
- ಭಾವನಾತ್ಮಕ ಕ್ಷಣಗಳಲ್ಲಿ ಸಹ ಸಂಯಮ ಕಾಪಾಡಿಕೊಂಡಿದ್ದಾರೆ.
- ತಂಡದ ಆಟಗಾರನಂತೆ ವರ್ತಿಸಿದ್ದಾರೆ.
ಇದರಿಂದ್ದಾಗಿ ಇವರು ಸಹ ಫಿನಾಲೆ ರೇಸ್ ನಲ್ಲಿ ಇದ್ದಾರೆ.ಕೆಲವೊಮ್ಮೆ ಶಾಂತ ಆಟವೆ ದೊಡ್ಡ ಶಕ್ತಿಯಾಗಬಲ್ಲದು ನ್ನುವುದಕ್ಕೆ ಧೃವಂತ ಧನುಷ್ ಉದಾಹರಣೆ.
ಕಿಚ್ಚ ಸುದೀಪ್ ಚಪ್ಪಾಳೆ – ದೊಡ್ಡ ಪ್ಲಸ್ ಪಾಯಿಂಟ್
ಇ ವಾರದ ಪ್ರಮುಖ ಹೈಲೇಟ್ ಅಂದ್ರೆ ಅದು ಕಿಚ್ಚ ಸುದೀಪ್ ಇ ಬಿಗ್ ಬಾಸ್ 12 ರಲ್ಲಿ ಇ ವಾರ ಇಬ್ಬರಿಗೆ ಕಿಚ್ಚನ ಮೆಚ್ಚುಗೆಯ ಚಪ್ಪಾಳೆ ನೀಡಿದ್ದು. ಹೌದು ಬಿಗ್ ಬಾಸ್ 12ರ ಇ ವಾರ ವಾರದ ಕಥೆ ಕಿಚ್ಚನ ಜೊತೆ ಎಪಿಸೋಡ್ ನಲ್ಲಿ ಸುದೀಪ್ ಅವರ ಇ ವಾರದ ಅಶ್ವಿನಿ ಅವರ ಆಟದ ಶೈಲಿ. ಎಲ್ಲರು ಅವರ ವಿರುದ್ಧ ಇದ್ದರು ಹಠದಿಂದ ಆಟವನ್ನ ಬಿಟ್ಟು ಕೊಡದೆ ಇದ್ದದ್ದು ಇದಲ್ಲಾ ಗಮನಿಸಿ ಕಿಚ್ಚ ಸುದೀಪ್ ಅವರು ಇ ವಾರದ ಮೆಚ್ಚುಗೆಯ ಚಪ್ಪಾಳೆಯನ್ನ ಅಶ್ವಿನಿ ಅವರಿಗೆ ನೀಡಿದ್ದಾರೆ. ಹಾಗೆ ಇ ಸೀಸನ್ ನಲ್ಲಿ ಎಲ್ಲವನ್ನ ಪರಿಗಣಿಸಿ ಮೊದಲಿಂದ ಇಲ್ಲಿವರೆಗಿನ ಆಟವಣ್ಣ ಗಮನಿಸಿ ಧೃವಂತ ಅವರಿಗೆ ಕಿಚ್ಚನ ಮೆಚ್ಚುಗೆ ಚಪ್ಪಾಳೆ ನೀಡಿದ್ದಾರೆ. ಬಿಗ್ ಬಾಸ್ ಇ ಸೀಸನ್ ನಲ್ಲಿ ಇದೆ ಹೈಲೇಟ ಪಾಯಿಂಟ್ ಆಗಿದೆ. ಹಿಂದೆ ಯಾವ ಸೀಸನ್ ಆಗೇ ಇಲ್ಲಾ ಅಂತ ಏನಿಲ್ಲಾ, ಬಿಗ್ ಬಾಸ್ ಕನ್ನಡ ಸೀಸನ್ 10ರಲ್ಲಿ ಹೀಗೆ ವಿನಯ ಗೌಡ ಅವರಿಗೆ ಇಡೀ ಸೀಸನ್ ಪರಿಗಣಿಸಿ ಕಿಚ್ಚ ಸುದೀಪ್ ಅವರು ಕಿಚ್ಚನ ಮೆಚ್ಚುಗೆಯ ಚಪ್ಪಾಳೆ ನೀಡಿದ್ದಾರೆ.
ಕಿಚ್ಚ ಸುದೀಪ್ ಅವರು ಮೆಚ್ಚಿದ್ದು ಏನು?
- ಇ ವಾರ ಅಶ್ವಿನಿ ಗೌಡ ದಿಟ್ಟ ದನದಿಂದ ಎಲ್ಲವನ್ನ ಎದಿರಿಸಿದ್ದು.
- ಧೃವಂತ ಸೀಸನ್ ಆರಂಭದಿಂದಲೂ ತೋರಿದ ತಾಳ್ಮೆ ಮತ್ತು ಆಟಕ್ಕೆ
- ಇದು ಇಬ್ಬರಿಗೂ ಆತ್ಮ ವಿಶ್ವಾಸವನ್ನ ನೀಡಿದೆ. ಜೊತೆಗೆ ಪ್ರೇಕ್ಷಕರ ದೃಷ್ಟಿಯೂ ಇವರ ಮೇಲೆ ಇನ್ನಷ್ಟು ಬಿದ್ದಿದೆ.
- ಫಿನಾಲೆ ಹತ್ತಿರ ಬರುತ್ತಿದೆ –ಆಟ ಬೇರೆ ಹಂತಕ್ಕೆ ಬಂದಿದೆ.
100 ದಿನಗಳ ಪ್ರಯಾಣ ಸುಲಭವಲ್ಲ. ಇಲ್ಲಿ ಉಳಿದಿರುವ ಪ್ರತಿಯೊಬ್ಬ ಸ್ಪರ್ಧಿಯೂ ಏನೋ ಒಂದು ವಿಶೇಷತೆ ಹೊಂದಿದ್ದಾರೆ. ಈಗ ಫಿನಾಲೆ ಹತ್ತಿರವಾಗುತ್ತಿದ್ದಂತೆ:
- ವೋಟ್ ಮುಖ್ಯವಾಗುತ್ತಿದೆ
- ಒಂದು ವಾರದ ಪರ್ಫಾರ್ಮೆನ್ಸ್ ದೊಡ್ಡ ಪರಿಣಾಮ ಬೀರುತ್ತಿದೆ
- ಪ್ರೇಕ್ಷಕರ ಅಭಿಪ್ರಾಯ ಕ್ಷಣಕ್ಷಣಕ್ಕೂ ಬದಲಾಗುತ್ತಿದೆ
ಗಿಲ್ಲಿ ಇನ್ನೂ ಸ್ಟ್ರಾಂಗ್ ಸ್ಪರ್ಧಿಯೇ, ಆದರೆ ಅಶ್ವಿನಿ ಗೌಡ ಹಾಗೂ ಧೃವಂತ ಧನುಷ್ ಅವರ ಇತ್ತೀಚಿನ ಆಟ ಗೆಲುವಿನ ಲೆಕ್ಕಾಚಾರವನ್ನು ಬದಲಾಯಿಸುವ ಶಕ್ತಿ ಹೊಂದಿದೆ.
ಯಾರು ಗೆಲ್ಲುತ್ತಾರೆ?
- ಗಿಲ್ಲಿ – ನಿರಂತರ ಮತ್ತು ಫ್ಯಾನ್ ಬೇಸ್
- ಅಶ್ವಿನಿ ಗೌಡ- ಇತ್ತೀಚಿನ ಆಟದ ಪ್ರದರ್ಶನ
- ದೃವಂತ್ – ಆಟದ ತೀರಿವು ಬದಲಾವಣೆ
- ಧನುಷ್- ಆಮೆ ಆತದಿಂದ ಆನೆ ಆಟಕ್ಕೆ
ಈ ಮೂವರ ಮಧ್ಯೆ ಸ್ಪರ್ಧೆ ತೀವ್ರವಾಗಿದೆ. ಅಂತಿಮವಾಗಿ ಪ್ರೇಕ್ಷಕರ ಮತವೇ ಅಂತೀಮ್ ತೀರ್ಪು ನೀಡಲಿದೆ.
ಬಿಗ್ ಬಾಸ್ ಕನ್ನಡ ಈ ಸೀಸನ್ 100 ದಿನಗಳನ್ನು ಪೂರೈಸಿ, ಈಗ ಅತ್ಯಂತ ಕುತೂಹಲಕರ ಹಂತಕ್ಕೆ ಬಂದಿದೆ. ಗ್ರಾಂಡ್ ಫಿನಾಲೆ ದಿನ ಯಾವ ಅಚ್ಚರಿ ಕಾದಿದೆ ಎಂದು ಕಾದು ನೋಡಬೇಕಿದೆ. ಒಂದು ಮಾತು ಮಾತ್ರ ಖಚಿತ –
ಈ ಬಾರಿ ಗೆಲುವು ಸುಲಭವಲ್ಲ, ಸ್ಪರ್ಧೆ ಭಾರೀ ತೀವ್ರವಾಗಿದೆ.
ಪ್ರೇಕ್ಷಕರ ಬೆಂಬಲ ಯಾರಿಗೆ ಸಿಗುತ್ತದೋ, ಆ ಕೈಯಲ್ಲೇ ಟ್ರೋಫಿ ಇರುತ್ತದೆ.
ಸಂಡೇ ಎಪಿಸೋಡ್ ಹೈಲೈಟ್
ಬಿಗಬಾಸ್ ಇಂದಿನ ಸೂಪರ್ ಸಂಡೆ ಎಪಿಸೋಡ್ನಲ್ಲಿ ಕಿಚ್ಚ ಸುದೀಪ್ ಮನೆಯಲ್ಲಿ ಸದಸ್ಯರಿಗೆ ಟಾಸ್ಕ್ ನೀಡಿದ್ದಾರೆ.ಟಾಸ್ಕ್ ಹೇಗಿದೆ ಅಂದ್ರೆ ಕೆಲವೊಂದು ಐಟಂ ಕಳಿಸಿದ್ದಾರೆ ಅಂದ್ರೆ ಕಹಿ ಕಸಾಯ, ಹೇರ್ ರಿಮೂವರ್, ನಿಂಬೆ ಹಣ್ಣು ಇ ರೀತಿ ಕಳಿಸಿದ್ದಾರೆ. ಇ ಐಟಂ ಗಳನ್ನ ಕಾರಣ ಕೊಟ್ಟು ತಮಗೆ ಯಾರಿಗೆ ಕುಡಿಸಬೇಕು ಅನ್ಸುತ್ತೆ ಅವರಿಗೆ ಕೂಡಿಸಬೇಕು.ಮೊದಲು ಕಾವ್ಯ ಗಿಲ್ಲಿಗೆ ಕರೆದು ಹೇರ್ ರಿಮೂವರ್ ಹಾಕಿ ಕಾಲಿನಿಂದ ಹೇರ್ ರಿಮೋವ್ ಪೆನ್ ಆದಾಗ ಗಿಲ್ಲಿ ಕಿರೀಚುತ್ತಾರೆ,ಆದರೆ ಸುದೀಪ್ ಬಿದ್ದು ಬಿದ್ದು ನಗ್ತಾರೆ.ನಂತ್ರ ರಘು ಗಿಲ್ಲಿಗೆ ಕರೆದು ನಿಂಬೆ ಹಣ್ಣು ತಿನ್ನಿಸಿದ್ದಾರೆ. ಗಿಲ್ಲಿ ನಿಂಬೆ ಹಣ್ಣು ತಿಂದು ಬಾತ್ರೂಮ್ ಗೆ ಒಡಿ ಹೋಗಿದ್ದಾರೆ. ನಂತರ ರಾಶಿಕ ಅವರು ಮತ್ತೆ ಹೇರ್ ರಿಮೂವರ್ ಯೂಸ್ ಮಾಡಿದ್ದಾರೆ. ಎಲ್ಲರಿಗೂ ಕೈ ಮುಗಿದು ಗಿಲ್ಲಿ ನಾನು ಇ ಎಪಿಸೋಡ್ ಇದ್ದೀನಿ ಅನ್ನೋದನ್ನ ಮರೆತು ಬಿಡಿ ಅಂದಿದ್ದಾರೆ. ಕೊನೆಗೆ ಅಶ್ವಿನಿ ಅವರು ಕಹಿ ಕಸಾಯವನ್ನ ಕುಡಿಸಿದ್ದಾರೆ. ಇ ಪ್ರೊಮೊ ನೋಡಬೇಕು ಅನಿಸಿದರೆ ನಮ್ಮ ವಾಟ್ಸಪ್ಪ್ ಗ್ರೂಪ್ ಜಾಯಿನ್ ಆಗಿ.
Ramesh Ambiger is a Kannada blogger with 3+ years of experience covering education, job updates, and government schemes. He delivers simple, reliable news that helps readers stay informed.









