ಬಿಗ್ ಬಾಸ್ ಸೀಜನ್ 12ರ ಗ್ರಾಂಡ್ ಫಿನಾಲೆ: ಕಾವ್ಯ ಮನೆಯಿಂದ ಔಟ್
ಕನ್ನಡ ಟೆಲಿವಿಷನ್ ಇತಿಹಾಸದಲ್ಲಿ ಅತ್ಯಂತ ಜನಪ್ರಿಯ ಹಾಗೂ ಅತಿ ಹೆಚ್ಚು ಚರ್ಚೆಯಾಗುತ್ತಿರುವ ಶೋ ಎಂದರೆ ಅದು ಬಿಗ್ ಬಾಸ್ ಕನ್ನಡ. ಪ್ರತಿ ಸೀಜನ್ ಗಳಲ್ಲೂ ಹೊಸ ಹೊಸ ರೀತಿಯ ಪ್ರಯೋಗಗಳು, ವಿಭಿನ್ನ ರಿತಿಯ ವ್ಯಕ್ತಿತ್ವಗಳನ್ನ ತಂದು ಬಿಗ್ ಬಾಸ್ ಮನೆಯನ್ನ ಅಂತಹ ವ್ಯಕ್ತಿತ್ವಗಳ ಜೊತೆ ಆಟ ನಡೆಸುವ ಈ ಆಟದಲ್ಲಿ ಗೆಲ್ಲೋದು ಯಾರು ಅನ್ನೋದೆ ಕೋತುಹಲದ ವಿಚಾರ ಹಾಗೆ ಮನಕಲಕುವ ಕಥೆಗಳು ಮತ್ತು ಅಚ್ಚರಿ ಮೂಡಿಸುವ ಟ್ವಿಸ್ಟ್ ಗಳ ಜೊತೆ ವೀಕ್ಷಕರನ್ನ ಸೆಳೆಯುತ್ತಿದೆ. ಅದೇ ರೀತಿಯಲ್ಲಿ ಬಿಗ್ ಬಾಸ್ ಕನ್ನಡ ಸೀಜನ್ 12 ಮುನ್ನುಗ್ಗುತ್ತಿದೆ.
ಈ ವಾರದಲ್ಲಿ ಕಿಚ್ಚ ಸುದೀಪ್ ಶನಿವಾರ ಎಪಿಸೋದಲ್ಲಿ ಸಿಸಿಎಲ್ ಕಾರಣದಿಂದ ಅದನ್ನ ಶುಕ್ರವಾರ ಸಾಯಂಕಾಲದ ಸಮಯದಲ್ಲಿ ಶನಿವಾರ ಹಾಗೂ ಭಾನುವಾರದ ಎಪಿಸೋಡ್ ಅನ್ನ ಚಿತ್ರಿಕರಿಸಿದ್ದಾರೆ. ನಂತರ ಕೆಲವು ಸದಸ್ಯರಿಗೆ ಸರಿಯಾಗಿ ಕ್ಲಾಸ ತೆಗೆದುಕೊಂಡಿದ್ದರೆ ಹಾಗೆ ತಮ್ಮ ರೀತಿಯಲ್ಲಿ ಅವರ ಮನಸ್ಸಿಗೆ ಮುಟ್ಟುವಂತೆ ಕಿಚ್ಚ ಸುದೀಪ್ ಅವರು ಮಾತನಾಡಿದ್ದಾರೆ. ಕಿಚ್ಚ ಸುದೀಪ್ ಅವರು ಯಾವುದೇ ಸಂದರ್ಭ್ ವನ್ನೂ ಸಹ ಅವರ ಎದುರಾಳಿ ಸದಸ್ಯನ ಮನಸ್ಸಿಗೆ ಘಾಷಿ ಯಾಗದಂತೆ ನೋಡಿಕೊಳ್ಳುತ್ತಾರೆ.
ಅಶ್ವಿನಿ ಗೌಡ ಹಾಗೂ ಧ್ರುವಂತ್ ಅವರಿಗೆ ಕಿಚ್ಚನ ಚಪ್ಪಾಳೆ
ಹೌದು ಬಿಗ್ ಬಾಸ್ ಆರಂಭವಾಗಿ 100 ದಿನಗಳನ್ನ ಪೂರ್ಣಗೊಳಿಸಿ ಬಿಗ್ ಬಾಸ್ ಮುನ್ನುಗ್ಗುತ್ತಿದ್ದೆ. ಈ ಬಿಗ್ ಬಾಸ್ 12ರ ಸೀಜನ್ ಹೋಲಿಸಿದರೆ ಬೇರೆ ಸೀಜನ್ ಗಳಲ್ಲಿ ಅತಿ ಹೆಚ್ಚು ಜನರಿಗೆ ಕಿಚ್ಚನ ಚಪ್ಪಾಳೆ ಕೊಟ್ಟಿದ್ದರು, ಆದರೆ ಈ ಸಲ ಕೆಲವೇ ಕೆಲವು ಸದಸ್ಯರಿಗೆ ಕಿಚ್ಚನ ಮೆಚ್ಚುಗೆ ಚಪ್ಪಾಳೆ ಸಿಕ್ಕಿದೆ. ಆದರೆ ಗ್ರಾಂಡ್ ಫಿನಾಲೆ ಹಿಂದಿನ ವಾರ ಅಂದ್ರೆ ಈ ವಾರ ಕಿಚ್ಚ ಸುದೀಪ್ ಅವರ ಕಡೆಯಿಂದ ಇಬ್ಬರು ವ್ಯಕ್ತಿಗೆ ಕಿಚ್ಚನ ಮೆಚ್ಚುಗೆ ಚಪ್ಪಾಳೆ ಸಿಕ್ಕಿದೆ. ಹೌದು ಈ ವಾರದ ಟಾಸ್ಕ್ ಹಾಗೂ ಅವರ ನಡುವಳಿಕೆ ನೋಡಿ ಕಿಚ್ಚ ಸುದೀಪ್ ಅವರು ಅಶ್ವಿನಿ ಗೌಡ ಅವರಿಗೆ ಕಿಚ್ಚನ ಮೆಚ್ಚುಗೆ ನೀಡಿದ್ರೆ, ಇಡಿ ಸೀಜನ್ ಪರಿಗಣಿಸಿ ಧ್ರುವಂತ್ ಅವರಿಗೆ ಕಿಚ್ಚನ ಮೆಚ್ಚುಗೆಯ ಚಪ್ಪಾಳೆ ಸಿಕ್ಕಿದೆ.
ಬಿಗ್ ಬಾಸ್ ಮನೆಯಿಂದ ಹೊರಗೆ ಬಂದಿದ್ದು ಯಾರು?
ಬಿಗ್ ಬಾಸ್ ಸೀಜನ್ 12ರ ಮನೆಯಿಂದ ಯಾರು ಹೊರಗೆ ಬರುತ್ತಾರೆ ಅನ್ನೋದಕ್ಕೆ ತೆರೆ ಬಿದ್ದಿದೆ. ಹೌದು ಬಿಗ್ ಬಾಸ್ ಸೀಜನ್ 12 ಮನೆಯಿಂದ ಈ ವಾರ ಕಾವ್ಯ ಶೈವ ಹೊರಬಂದಿದ್ದಾರೆ. ಕಾವ್ಯ ಶೈವ ಅವರು ಇಷ್ಟು ಬೇಗ ಬರೋಕೆ ಅವರ ಫ್ಯಾಮಿಲಿ ಅವರೇ ಕಾರಣವಾದ್ರು ಅನ್ನೋ ಮಾತಿದೆ. ಬಿಗ್ ಬಾಸ್ ಮನೆಯಿಂದ ಗ್ರಾಂಡ್ ಫಿನಾಲೆ ಹತ್ತಿರದಲ್ಲಿ ಇದ್ದಾಗ ಕಾವ್ಯ ಅವರು ಬಿಗ್ ಬಾಸ್ ಕನ್ನಡ ಸೀಜನ್ 12ರ ಮನೆಯಿಂದ ಎಲಿಮಿನೇಟ್ ಆಗಿ ತಮ್ಮ ಪ್ರಯಾಣವನ್ನ ಮುಗಿಸಿ ಕಾವ್ಯ ಹೊರಬಂದಿದ್ದರೆ. ಇದನ್ನ ಭಾನುವಾರದ ಎಪಿಸೋಡನಲ್ಲಿ ತೋರಿಸಲಿದ್ದಾರೆ.
ಬಿಗ್ ಬಾಸ್ 12ರ ಗ್ರಾಂಡ್ ಫಿನಾಲೆ ಯಾವಾಗ?
ಹೌದು ಬಿಗ್ ಬಾಸ್ ಸೀಜನ್ 12 ಮುಗಿಯುವ ಹಂತಕ್ಕೆ ಬಂದಿದೆ. ಈಗಾಗಲೇ 100 ದಿನಗಳನ್ನ ಯಶಸ್ವಿಯಾಗಿ ಪೂರ್ಣ ಗೊಳಿಸಿದೆ ಆದರೆ ಇದಿಗ ಬಿಗ್ ಬಾಸ್ ಕನ್ನಡ ಸೀಜನ್ 12ರ ಗ್ರಾಂಡ್ ಫಿನಾಲೆ ದಿನಾಂಕವನ್ನ ನಿಗದಿ ಮಾಡಿದ್ದಾರೆ. ಹೌದು ಇದೆ 15 ಹಾಗೂ 16ನೆ ತಾರಿಕೀನಂದು ಬಿಗ್ ಬಾಸ್ ಗ್ರಾಂಡ್ ಫಿನಾಲೆ ಯ ಡಾನ್ಸ್ ಶೂಟ್ ನಡೆಯಲಿದೆ. ಹಾಗೆ ಇದೆ ಜನವರಿ 17 ಹಾಗೂ 18ರಂದು ಬಿಗ್ ಬಾಸ್ ಕನ್ನಡ ಸೀಜನ್ 12 ರ ಗ್ರಾಂಡ್ ಫಿನಾಲೆ ನಡೆಯಲಿದೆ.
ರಕ್ಷಿತಾಗೆ ಸಕತ್ ಕ್ಲಾಸ್ ತೆಗೆದುಕೊಂಡ ಕಿಚ್ಚ ಸುದೀಪ್
ಹೌದು ಬಿಗ್ ಬಾಸ್ ಸೀಸನ್ 12ರ ಇವತ್ತಿನ ವಾರದ ಕಥೆ ಕಿಚ್ಚನ ಜೊತೆ ಎಪಿಸೋಡ್ ನಲ್ಲಿ ಕಿಚ್ಚ ಸುದೀಪ್ ಅವರು ರಕ್ಷಿತಾ ಸಕತ್ ಆಗಿ ಕ್ಲಾಸ್ ತೆಗೆದುಕೊಂಡಿದ್ದಾರೆ. ರಕ್ಷಿತಾ ಈ ವಾರ ನಡೆದುಕೊಂಡ ರೀತಿಯ ಬಗ್ಗೆ ಕಿಚ್ಚ ಸುದೀಪ್ ಅವರು ಮಾತನಾಡಿ ತಿಳಿ ಹೇಳಿದ್ದಾರೆ.ಕಿಚ್ಚ ಸುದೀಪ್ ಅವರು ರಕ್ಷಿತಾ ಈ ವಾರ ಗಿಲ್ಲಿ ಹತ್ತಿರ ಕುಳಿತಾಗ ಅವನ ಹತ್ತಿರ ಇದ್ದಂತೆ ಬಿನ್ ಬ್ಯಾಗ್ ತೆಗೆದು ಬೇರೆ ಕಡೆ ಇಟ್ಟಾಗ, ಗಿಲ್ಲಿ ಕೇಳ್ತಾರೆ ಅಲ್ಲಿ ಯಾಕೆ ಎತ್ತಿ ರಕ್ಷಿತಾ ಅಂತ ಅದಕ್ಕೆ ರಕ್ಷಿತಾ ನಮ್ಮ್ ಜೊತೆ ಯಾರು ಕುಳಿತು ಕೊಳ್ಳಬಾರದು ಅಂತ ಹಾಗೂ ರಾಶಿಕಾ ಹಾಗೂ ರಕ್ಷಿತಾ ಮದ್ಯ ಜಗಳ ಶುರುವಾದಾಗ ರಕ್ಷಿತಾ ಪದೇ ಪದೇ ರಾಶಿಕಾಗೆ ನೀವು ರಘು ಯೂಸ್ ಮಾಡಿಕೊಳ್ಳುತ್ತಿದ್ದೀರಿ ಅಂತ ಹೇಳಿದ್ರು. ಅದರ ಬಗ್ಗೆ ಕಿಚ್ಚ ಸುದೀಪ್ ಅವರು ರಕ್ಷಿತಾ ರಘು ಹಾಗೂ ಗಿಲ್ಲಿ ಹತ್ತಿರ ನಿಮ್ಮನ್ನ ಬಿಟ್ಟರೆ ಬೇರೆ ಅವರು ಕ್ಲೋಸ್ ಆಗೋಕೆ ಬಂದ್ರೆ ನಿಮಗೆ ಆಗಲ್ಲ ಅಂತ ಕೇಳಿದ್ರು, ಕಿಚ್ಚನ ಈ ಮಾತಿಗೆ ರಕ್ಷಿತಾ ಮೌನ ಆಗ್ತಾರೆ. ನಂತರ ಸುದೀಪ್ ಸಂಬಂಧದ ಹೆಸರಿನಲ್ಲಿ ಬಿಗ್ ಬಾಸ್ ಮನೆಯನ್ನ ನೀವು ನರಕ ಮಾಡೋಕೆ ನೋಡಿದ್ರೆ ನಿಮಗೆ 2 ಪಾಯಿಂಟ್ ಹೇಳ್ತಿನಿ ಸಂಬಂಧ ಶಾಶ್ವತ ಅಲ್ಲಾ, ಯಾರ ಅಪ್ಪನ ಮನೆ ಆಸ್ತಿ ಅಲ್ಲಾ ಅಂದ್ರು. ನಂತರ ಸುದೀಪ್ ಅವರು ರಕ್ಷಿತಾಗೆ ನಿಮ್ಮ ಮೂರು ಜನರಲ್ಲಿ ಅಂದ್ರೆ ರಘು ರಕ್ಷಿತಾ ಹಾಗೂ ಗಿಲ್ಲಿ ನಿಮ್ಮ ಮೂರು ಜನರಲ್ಲಿ ಯಾರು ಗೆಲ್ಬೇಕು ಅಂದಾಗ ರಕ್ಷಿತಾ ಮೊದಲು ನಾನು ಗೆಲ್ಬೇಕು ಅನ್ನೋ ಪದ ಯೂಸ್ ಮಾಡ್ತಾರೆ. ಆಗ ಕಿಚ್ಚ ಸುದೀಪ್ ನಕ್ಕು ಚಪ್ಪಾಳೆ ಹೊಡಿತಾರೆ.ನಂತರ ಸುದೀಪ್ ಅವರು ನೀವು ಈ ಮನೆಯಲ್ಲಿ ತಂಗಿ ಅಕ್ಕ ಅಣ್ಣಾ ಅಂತ ಸಂಬಂಧ ಮಾಡಿಕೊಂಡಿದ್ದೀರಾ, ಈಗ ಬಾಗಿಲು ಓಪನ್ ಆಗುತ್ತೆ ನೀವು ಎಲ್ಲರು ಬೇರೆ ಬೇರೆ ಕಡೆ ಹೋಗ್ತೀರಾ ಅಂತ ಹೇಳಿದ್ದಾರೆ. ಒಟ್ಟಿನಲ್ಲಿ ಕಿಚ್ಚ ಸುದೀಪ್ ರಕ್ಷಿತಾಗೆ ಸಕತ್ ಕ್ಲಾಸ್ ತೆಗೆದು ಕೊಂಡಿದ್ದಾರೆ.
ಕಾವ್ಯ ಯಾಕೆ ಈ ವಾರ ಹೊರಗೆ ಬಂದ್ರು
ಕಾವ್ಯ ಗಿಲ್ಲಿ ಗೆಳೆತನ ಈ ಮನೆಯಲ್ಲಿ ಟಾಮ್ ಆಂಡ್ ಜೆರ್ರಿ ತರಹ ಈ ಮನೆಯಲ್ಲಿ ಶುರು ವಾಗಿತ್ತು. ಸೀಸನ್ ಮೊದಲಿನಿಂದಲೂ ಒಳ್ಳೆ ರೀತಿಯಲ್ಲಿ ಅದು ಬರುತ್ತಿತ್ತು ಆದರೆ ಫ್ಯಾಮಿಲಿ ವೀಕ್ ಬಂದಾಗ ಕಾವ್ಯ ಫ್ಯಾಮಿಲಿ ಒಳಗೆ ಬಂದು ದೊಡ್ಡ ಎಡವಟ್ಟು ಕೂಡ ಮಾಡಿಕೊಂಡಿದ್ದರು.ನಂತರ ಅದು ಕೂಡ ಬಿಟ್ಟು ಮತ್ತೆ ಬಿಗ್ ಬಾಸ್ ಟೀಮ್ ಮತ್ತೆ ಅವರ ತಂದೆ ತಾಯಿಯನ್ನ ಒಳಗಡೆ ಕಳಿಸಿದ್ದರು.ಆದರೆ ಕಾವ್ಯ ತಮ್ಮ ಹೇಳಿದ ಮಾತುಗಳು ಕಾವ್ಯ ತಲೆಯಲ್ಲಿ ಹಾಗೆ ಕುಳಿತು ಗಿಲ್ಲಿ ಜೊತೆ ಕಾವ್ಯ ತುಂಬಾ ಹತ್ತಿರವಾಗೋಕೆ ನೋಡಿದ್ರು ಅದೇ ಅವರಿಗೆ ಮುಳುವಾಯ್ತಾ ಅದೊಂದು ಕಾರಣ ವೀರಬಹುದು.ಕಾವ್ಯ ಅವರನ್ನ ಇಸ್ಟ್ ಪಡೋಕೆ ಮೂಲ ಕಾರಣ ಕೂಡ ಗಿಲ್ಲಿನೆ ಆಗಿದ್ದರು.
Bigg Boss Kannada – ಗ್ರಾಂಡ್ ಫಿನಾಲೆ ಕಡೆಗೆ ತೀವ್ರ ಸ್ಪರ್ಧೆ
ಬಿಗ್ ಬಾಸ್ ಮನೆ ಅಂತಿಮ ಹಂತಕ್ಕೆ ಬಂದಿರುವಾಗ ಸ್ಪರ್ಧಿಗಳ ನಡುವೆ ಇರುವ ಸ್ಪರ್ಧಾತ್ಮಕ ಮನೋಭಾವ ಇನ್ನಷ್ಟು ಗಟ್ಟಿಯಾಗುತ್ತಿದೆ. ಈಗ ಮನೆಯೊಳಗೆ ಉಳಿದಿರುವ ಪ್ರತಿಯೊಬ್ಬ ಸ್ಪರ್ಧಿಗೂ ಗೆಲುವೇ ಗುರಿ. ಪ್ರೇಕ್ಷಕರ ಮತಗಳೇ ಇಲ್ಲಿ ಅಂತಿಮ ತೀರ್ಪು ನೀಡುವ ಶಕ್ತಿ. ಕಳೆದ ಕೆಲವಾರು ವಾರಗಳಿಂದ ನಡೆದ ಟಾಸ್ಕ್‌ಗಳಲ್ಲಿ ಸ್ಪರ್ಧಿಗಳು ತಮ್ಮ ಶಕ್ತಿಯನ್ನೂ ದುರ್ಬಲತೆಯನ್ನೂ ಸ್ಪಷ್ಟವಾಗಿ ತೋರಿಸಿದ್ದಾರೆ. ಕೆಲವರು ಶಾಂತ ಸ್ವಭಾವದಿಂದ ಪ್ರೇಕ್ಷಕರ ಮನ ಗೆದ್ದಿದ್ದರೆ, ಇನ್ನೂ ಕೆಲವರು ನೇರ ಮಾತಿನಿಂದ ಗಮನ ಸೆಳೆದಿದ್ದಾರೆ.
ಕಾವ್ಯ ಹೊರಬಂದ ನಂತರ ಮನೆಯೊಳಗಿನ ಸಮೀಕರಣಗಳು ಸಂಪೂರ್ಣ ಬದಲಾಗುವ ಸಾಧ್ಯತೆ ಇದೆ. ಗಿಲ್ಲಿ ಜೊತೆಗಿನ ಅವಳ ಗೆಳೆತನ ಮತ್ತು ಅದರಿಂದ ಹುಟ್ಟಿದ ವಿವಾದಗಳು ಮನೆಯೊಳಗಿನ ಚರ್ಚೆಗೆ ಕಾರಣವಾಗಿದ್ದವು. ಈಗ ಅವಳು ಹೊರಬಂದಿದ್ದರಿಂದ ಗಿಲ್ಲಿ ಆಟದ ಮೇಲೆ ನೇರ ಪರಿಣಾಮ ಬೀರುವ ಸಾಧ್ಯತೆ ಇದೆ. ಯಾಕಂದ್ರೆ ಮನೆಯಲ್ಲಿ ಸಂಬಂಧಗಳು, ಗೆಳೆತನ, ಜಗಳ—allವು ಆಟದ ದಿಕ್ಕನ್ನೇ ಬದಲಿಸಬಹುದು.
ಇನ್ನೊಂದೆಡೆ, ಅಶ್ವಿನಿ ಗೌಡ ಹಾಗೂ ಧ್ರುವಂತ್ ಅವರಿಗೆ ಸಿಕ್ಕ ಕಿಚ್ಚನ ಮೆಚ್ಚುಗೆ ಅವರ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ಗ್ರಾಂಡ್ ಫಿನಾಲೆ ಹತ್ತಿರವಾಗುತ್ತಿರುವುದರಿಂದ ಪ್ರತಿಯೊಂದು ಮಾತು, ಪ್ರತಿಯೊಂದು ನಡೆಗೂ ಮಹತ್ವ ಬಂದಿದೆ. ಪ್ರೇಕ್ಷಕರು ಈಗ ಸ್ಪರ್ಧಿಗಳ ನೈಜ ವ್ಯಕ್ತಿತ್ವವನ್ನೇ ಗಮನಿಸುತ್ತಿದ್ದಾರೆ. ಯಾರು ನಿಜವಾಗಿಯೂ ಸತ್ಯವಾಗಿ ಆಟ ಆಡಿದ್ದಾರೆ? ಯಾರು ಸಂಬಂಧಗಳ ಹೆಸರಿನಲ್ಲಿ ಸ್ಟ್ರಾಟಜಿ ಬಳಸಿದ್ದಾರೆ? ಅನ್ನೋದನ್ನ ಜನರು ತೂಕಮಾಪನ ಮಾಡುತ್ತಿದ್ದಾರೆ.
ಗ್ರಾಂಡ್ ಫಿನಾಲೆ ದಿನಗಳಲ್ಲಿ ಡಾನ್ಸ್ ಪರ್ಫಾರ್ಮೆನ್ಸ್, ವಿಶೇಷ ಅತಿಥಿಗಳ ಆಗಮನ, ಹಿಂದಿನ ಸ್ಪರ್ಧಿಗಳ ರೀ-ಎಂಟ್ರಿ—allವು ಕಾರ್ಯಕ್ರಮಕ್ಕೆ ಹೆಚ್ಚುವರಿ ರಂಗು ತರುವ ಸಾಧ್ಯತೆ ಇದೆ. ಎರಡು ದಿನಗಳ ವಿಶೇಷ ಕಾರ್ಯಕ್ರಮವಾಗಿ ನಡೆಯುವ ಫಿನಾಲೆ ಎಪಿಸೋಡ್‌ನಲ್ಲಿ ಟಾಪ್ ಸ್ಪರ್ಧಿಗಳ ಪಯಣವನ್ನು ಸ್ಮರಿಸುವ ಕ್ಷಣಗಳೂ ಇರಲಿವೆ. 100 ದಿನಗಳ ಪ್ರಯಾಣದಲ್ಲಿ ಯಾರಿಗೆ ಎಷ್ಟು ಏರುಪೇರುಗಳಾಯ್ತು, ಯಾರು ಹೇಗೆ ಬೆಳೆದರು ಅನ್ನೋದನ್ನ ಫ್ಲ್ಯಾಶ್‌ಬ್ಯಾಕ್ ಮೂಲಕ ತೋರಿಸುವ ಸಾಧ್ಯತೆ ಇದೆ.
ಒಟ್ಟಿನಲ್ಲಿ, ಈ ಸೀಸನ್ ಹಲವು ವಿವಾದಗಳು, ಭಾವನಾತ್ಮಕ ಕ್ಷಣಗಳು ಮತ್ತು ಅಚ್ಚರಿ ಎಲಿಮಿನೇಷನ್‌ಗಳ ಮೂಲಕ ಗಮನ ಸೆಳೆದಿದೆ. ಈಗ ಎಲ್ಲರ ಕಣ್ಣು ಒಂದೇ ಪ್ರಶ್ನೆಯ ಮೇಲೆ ಇದೆ—ಈ ಬಾರಿ ಟ್ರೋಫಿ ಯಾರ ಕೈಗೆ ಸೇರುತ್ತದೆ? ಪ್ರೇಕ್ಷಕರ ಮತವೇ ಅಂತಿಮ ತೀರ್ಪು. ಮುಂದಿನ ಕೆಲವೇ ದಿನಗಳಲ್ಲಿ ಬಿಗ್ ಬಾಸ್ ಕನ್ನಡ ಸೀಸನ್ 12ರ ವಿಜೇತ ಘೋಷಣೆಯಾಗಲಿದೆ.
ಇದರ ಬಗ್ಗೆ ನಿಮ್ಮ ಅನಿಸಿಕೆ ಅನ್ನು ನಮ್ಮ ಕಾಮೆಂಟ್ ಬಾಕ್ಸ್ ಅಲ್ಲಿ ತಿಳಿಸಿ