Telegram Join My Telegram WhatsApp Join My WhatsApp

SC ಕೃಷಿ ವಿದ್ಯಾರ್ಥಿಗಳು ಮತ್ತು ಯುವಕರಿಗೆ ಉಚಿತ Advanced ಡ್ರೋನ್ ತರಬೇತಿ – ಕರ್ನಾಟಕ ಸರ್ಕಾರದ ಮಹತ್ವದ ಯೋಜನೆ

SC ಕೃಷಿ ವಿದ್ಯಾರ್ಥಿಗಳು ಮತ್ತು ಯುವಕರಿಗೆ ಉಚಿತ Advanced ಡ್ರೋನ್ ತರಬೇತಿ – ಕರ್ನಾಟಕ ಸರ್ಕಾರದ ಮಹತ್ವದ ಯೋಜನೆ

ಇಂದಿನ ಕಾಲದಲ್ಲಿ ಕೃಷಿ ಕ್ಷೇತ್ರದಲ್ಲಿ ತಂತ್ರಜ್ಞಾನ ಮಹತ್ವ ಹೆಚ್ಚಾಗಿದೆ. ಆಧುನಿಕ ಕಾಲದಿಂದ ಬಂದ ಕೃಷಿ ಪದ್ಧತಿಯ  ಕೃಷಿಯಿಂದ ಹೊರಬಂದು, ಆಧುನಿಕ ವಿಧಾನಗಳನ್ನು ಅಳವಡಿಸಿಕೊಂಡರೆ ಮಾತ್ರ ಉತ್ತಮ ಉತ್ಪಾದನೆ ಮತ್ತು ಲಾಭ ಪಡೆಯಲು ಸಾಧ್ಯ ವಾಗುತ್ತದೆ. ಈ ಹಿನ್ನೆಲೆ ಕೃಷಿ ಕ್ಷೇತ್ರದಲ್ಲಿ ಡ್ರೋನ್ ತಂತ್ರಜ್ಞಾನ ಪ್ರಮುಖ ಪಾತ್ರ ವಹಿಸುತ್ತಿದೆ. ರೈತರಿಗೆ ಹಾಗೂ ಕೃಷಿ ವಿದ್ಯಾರ್ಥಿಗಳಿಗೆ ಈ ಹೊಸ ತಂತ್ರಜ್ಞಾನವನ್ನು ಕಲಿಸುವ ಉದ್ದೇಶದಿಂದ ಕರ್ನಾಟಕ ಸರ್ಕಾರದ ಸಮಾಜ ಕಲ್ಯಾಣ ಇಲಾಖೆ ಮಹತ್ವದ ಯೋಜನೆಯನ್ನು ಜಾರಿಗೆ ತಂದಿದೆ.

ಇಂದಿರಾ ಗಾಂಧಿ ವೃತ್ತಿ ಅಭಿವೃದ್ದಿ ಕೇಂದ್ರ, ಬೆಂಗಳೂರು ಮೂಲಕ 2024–25ನೇ ಸಾಲಿನಲ್ಲಿ ಪರಿಶಿಷ್ಟ ಜಾತಿಯ ಕೃಷಿ ವಿಜ್ಞಾನ ವಿದ್ಯಾರ್ಥಿಗಳು, ಕೃಷಿ ಪದವೀಧರರು ಹಾಗೂ ಕೃಷಿ ವಿಜ್ಞಾನಿಗಳಿಗೆ Advanced ಡ್ರೋನ್ ತರಬೇತಿ ಕಾರ್ಯಕ್ರಮವನ್ನು ಆರಂಭಿಸಲಾಗಿದೆ. ಈ ತರಬೇತಿ ಸಂಪೂರ್ಣವಾಗಿ ಉಚಿತವಾಗಿದ್ದು, ವಸತಿಯ ವ್ಯವಸ್ಥೆಯೂ ಸಹ ಸರ್ಕಾರದಿಂದಲೇ ಒದಗಿಸಲಾಗುತ್ತದೆ.

ತರಬೇತಿ ಕಾರ್ಯಕ್ರಮದ ಉದ್ದೇಶ

ಈ ಯೋಜನೆಯ ಪ್ರಮುಖ ಉದ್ದೇಶ ಪರಿಶಿಷ್ಟ ಜಾತಿಯ ಯುವಕರಿಗೆ ಉದ್ಯೋಗಮುಖಿ ಕೌಶಲ್ಯ ಒದಗಿಸುವುದು. ಇಂದಿನ ದಿನಗಳಲ್ಲಿ ಡ್ರೋನ್ ಪೈಲಟ್, ಡ್ರೋನ್ ಟೆಕ್ನೀಷಿಯನ್, ಅಗ್ರಿ ಡ್ರೋನ್ ಆಪರೇಟರ್‌ಗಳಿಗೆ ದೊಡ್ಡ ಬೇಡಿಕೆ ಇದೆ. ಕೃಷಿಯಲ್ಲಿ ಡ್ರೋನ್ ಬಳಸಿ ಬೆಳೆ ಸಿಂಪಡಣೆ, ಬೆಳೆ ಆರೋಗ್ಯ ಪರಿಶೀಲನೆ, ಮ್ಯಾಪಿಂಗ್, ಸಮೀಕ್ಷೆ ಮತ್ತು ಪ್ರಿಸಿಷನ್ ಅಗ್ರಿಕಲ್ಚರ್ ಮಾಡಬಹುದು. ಇದರಿಂದ ರೈತರಿಗೆ ಸಮಯ, ಹಣ ಮತ್ತು ಶ್ರಮ ಉಳಿಯುತ್ತದೆ. ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಈ Advanced Drone Training ಅನ್ನು ರೂಪಿಸಿದೆ.

ತರಬೇತಿಯ ಅವಧಿ ಮತ್ತು ಸ್ಥಳ ಎಲ್ಲಿರುತ್ತದೆ 

ಈ ತರಬೇತಿಯನ್ನು ಕರ್ನಾಟಕ ರಾಜ್ಯದ 4 ಕಂದಾಯ ವಿಭಾಗಗಳಲ್ಲಿ ಪ್ರತ್ಯೇಕವಾಗಿ ನಡೆಸಲಾಗುತ್ತದೆ. ಪ್ರತಿ ವಿಭಾಗದಲ್ಲಿ 15 ದಿನಗಳ ವಸತಿಯುತ ತರಬೇತಿ ನೀಡಲಾಗುತ್ತದೆ. ತರಬೇತಿ ಅವಧಿಯಲ್ಲಿ ಅಭ್ಯರ್ಥಿಗಳಿಗೆ ಊಟ ಮತ್ತು ವಸತಿ ಸೌಲಭ್ಯ ದೊರೆಯುತ್ತದೆ. ಇದರಿಂದ ದೂರದ ಊರುಗಳಿಂದ ಬರುವ ವಿದ್ಯಾರ್ಥಿಗಳಿಗೂ ಯಾವುದೇ ಅಡಚಣೆ ಆಗುವುದಿಲ್ಲ.

ಯಾರು ಅರ್ಜಿ ಸಲ್ಲಿಸಬಹುದು?

ಈ ತರಬೇತಿಗೆ ಅರ್ಜಿ ಸಲ್ಲಿಸಲು ಕೆಲವು ಅರ್ಹತೆಗಳನ್ನು ನಿಗದಿಪಡಿಸಲಾಗಿದೆ.
•ಅಭ್ಯರ್ಥಿಕರ್ನಾಟಕ ರಾಜ್ಯದ ನಿವಾಸಿಯಾಗಿರಬೇಕು
ಪರಿಶಿಷ್ಟ ಜಾತಿ (SC) ವರ್ಗಕ್ಕೆ ಸೇರಿರಬೇಕು
•ವಯಸ್ಸು18 ರಿಂದ 45 ವರ್ಷಗಳೊಳಗೆ ಇರಬೇಕು
• UGC ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಕೃಷಿ ವಿಜ್ಞಾನ ಓದುತ್ತಿರುವ ವಿದ್ಯಾರ್ಥಿಗಳು ಅಥವಾ ಕೃಷಿ ಪದವೀಧರರು ಆಗಿರಬೇಕು
•ಜಾತಿಮತ್ತುಆದಾಯಪ್ರಮಾಣಪತ್ರಹೊಂದಿರಬೇಕು
•ಕುಟುಂಬದವಾರ್ಷಿಕಆದಾಯರೂ. 8 ಲಕ್ಷ ಮೀರಬಾರದು

ತರಬೇತಿಯಲ್ಲಿ ಏನು ಕಲಿಸಲಾಗುತ್ತದೆ?

ಈ Advanced ಡ್ರೋನ್ ತರಬೇತಿಯಲ್ಲಿ ಸಿದ್ಧಾಂತ ಹಾಗೂ ಪ್ರಾಯೋಗಿಕ ಎರಡೂ ರೀತಿಯ ತರಬೇತಿ ನೀಡಲಾಗುತ್ತದೆ. ತರಬೇತಿಯ ಮುಖ್ಯ ವಿಷಯಗಳು ಈ ಕೆಳಗಿನಂತಿವೆ:

•ಡ್ರೋನ್ ಸುರಕ್ಷತೆ ಮತ್ತು ಸರ್ಕಾರದ ನಿಯಮಗಳು ತಿಳಿಸಲಾಗುತ್ತದೆ

•ಡ್ರೋನ್ ಹಾರಾಟದ ಮೂಲಭೂತ ತತ್ವಗಳು ಬಗ್ಗೆ ಹೇಳಿ ಕೊಡಲಾಗುವುದು

•ಹವಾಮಾನ ಮತ್ತು ಹಾರಾಟದ ನಡುವಿನ ಸಂಬಂಧವನ್ನೂ ತಿಳಿಸುತ್ತಾರೆ

•ಡ್ರೋನ್ ಉಪಕರಣಗಳ ನಿರ್ವಹಣೆ ಮತ್ತು ದುರಸ್ತಿ ಹೇಗೆ ಇರುತ್ತದೆ ಎಂದು ಹೇಳಿಕೊಡುತ್ತಾರೆ

•ರಿಸ್ಕ್ ಮ್ಯಾನೇಜ್ಮೆಂಟ್ ಮತ್ತು ಸುರಕ್ಷತಾ ಕ್ರಮಗಳು ಬಗ್ಗೆ ಮಾಹಿತಿ ಮತ್ತು ಮುನ್ನೆಚ್ಚರಿಕೆ ಕ್ರಮ

•ಡ್ರೋನ್ ಸಿಮ್ಯುಲೇಟರ್ ಮೂಲಕ ತರಬೇತಿ ಕೊಡುತ್ತಾರೆ

•ಪ್ರಾಯೋಗಿಕವಾಗಿ ಡ್ರೋನ್ ಹಾರಿಸುವ ತರಬೇತಿ ಕೊಡುತ್ತಾರೆ

•ಕೃಷಿಯಲ್ಲಿ ಡ್ರೋನ್ ಬಳಕೆ – ಬೆಳೆ ಸಿಂಪಡಣೆ, ಬೆಳೆ ಆರೋಗ್ಯ ಪರಿಶೀಲನೆ ಇದರ ಬಗ್ಗೆ ಮಾಹಿತಿ

•ಡ್ರೋನ್ ಸರ್ವೇ, ಮ್ಯಾಪಿಂಗ್ ಮತ್ತು ಡೇಟಾ ವಿಶ್ಲೇಷಣೆ ಬಗ್ಗೆ ಹೇಳಿ ಕೊಡುತ್ತಾರೆ

•ಪ್ರಿಸಿಷನ್ ಅಗ್ರಿಕಲ್ಚರ್ ಬಗ್ಗೆ ಮಾಹಿತಿ ಹೇಳುತ್ತಾರೆ

ಈ ತರಬೇತಿಯ ಮೂಲಕ ಅಭ್ಯರ್ಥಿಗಳು ಸಂಪೂರ್ಣವಾಗಿ ಡ್ರೋನ್ ನಿರ್ವಹಣೆ ಕಲಿತು, ಪ್ರಾಯೋಗಿಕ ಅನುಭವವನ್ನು ಪಡೆಯುತ್ತಾರೆ.

ಆಯ್ಕೆ ವಿಧಾನ ಹೇಗೆ ನಡೆಯುತ್ತದೆ ಗೊತ್ತ?

ಅಭ್ಯರ್ಥಿಗಳ ಆಯ್ಕೆಯನ್ನು 12ನೇ ತರಗತಿ ಅಥವಾ ಅದಕ್ಕೆ ಸಮಾನ ಪರೀಕ್ಷೆಯ ಅಂಕಗಳ ಆಧಾರದಲ್ಲಿ ಮಾಡಲಾಗುತ್ತದೆ. ಜೊತೆಗೆ ಮೊದಲು ಅರ್ಜಿ ಸಲ್ಲಿಸಿದವರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ. ಆದ್ದರಿಂದ ಅರ್ಹ ಅಭ್ಯರ್ಥಿಗಳು ವಿಳಂಬ ಮಾಡದೇ ಅರ್ಜಿ ಸಲ್ಲಿಸುವುದು ಉತ್ತಮ ಎಂದು ನಾವು ಹೇಳುತ್ತೇವೆ .

ಅರ್ಜಿ ಸಲ್ಲಿಸುವ ವಿಧಾನ

ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಸಮಾಜ ಕಲ್ಯಾಣ ಇಲಾಖೆಯ ಅಧಿಕೃತ ವೆಬ್‌ಸೈಟ್ ಬಳಸಬೇಕು.

ಅರ್ಜಿಯ ವೆಬ್‌ಸೈಟ್:

Apply For Application

ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ: 15 ಜನವರಿ 2025

ಮುಖ್ಯ ಸೂಚನೆಗಳು

•ಅಧಿಕೃತ ಮಾಹಿತಿ ಸಮಾಜ ಕಲ್ಯಾಣ ಇಲಾಖೆಯ ವೆಬ್‌ಸೈಟ್‌ನಲ್ಲಿ ಮಾತ್ರ ಪ್ರಕಟಿಸಲಾಗುತ್ತದೆ

•ಯಾವುದೇ ಮಧ್ಯವರ್ತಿ ಅಥವಾ ಏಜೆಂಟ್ ಮೂಲಕ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ

•ತಪ್ಪು ಮಾಹಿತಿ ನೀಡಿದರೆ ಅದರ ಹೊಣೆ ಅಭ್ಯರ್ಥಿಯದ್ದೇ ಆಗಿರುತ್ತದೆ

•ವೆಬ್‌ಸೈಟ್‌ನ್ನು ಕಾಲಕಾಲಕ್ಕೆ ಪರಿಶೀಲಿಸುವುದು ಅಗತ್ಯ ವಾಗಿರುತ್ತದೆ

ಈ ತರಬೇತಿಯ ಲಾಭಗಳು ನಿಮಗೆ ಏನು ಉಪಯೋಗ

ಈ Advanced ಡ್ರೋನ್ ತರಬೇತಿಯ ಮೂಲಕ ಅಭ್ಯರ್ಥಿಗಳು:

•ಡ್ರೋನ್ ಪೈಲಟ್ ಅಥವಾ ಅಗ್ರಿ ಡ್ರೋನ್ ಆಪರೇಟರ್ ಆಗಿ ಉದ್ಯೋಗ ಪಡೆಯಬಹುದು

•ಸ್ವ ಉದ್ಯೋಗವಾಗಿ ರೈತರಿಗೆ ಡ್ರೋನ್ ಸೇವೆ ಒದಗಿಸಬಹುದು

•ಆಧುನಿಕ ಕೃಷಿಯಲ್ಲಿ ತಂತ್ರಜ್ಞಾನ ಬಳಸಿ ಹೆಚ್ಚಿನ ಆದಾಯ ಗಳಿಸಬಹುದು

•ಭವಿಷ್ಯದ ಕೃಷಿ ಕ್ಷೇತ್ರದಲ್ಲಿ ಸ್ಪರ್ಧಾತ್ಮಕವಾಗಿ ನಿಲ್ಲಬಹುದು

ಕರ್ನಾಟಕ ಸರ್ಕಾರದ ಈ Advanced ಡ್ರೋನ್ ತರಬೇತಿ ಯೋಜನೆ ಪರಿಶಿಷ್ಟ ಜಾತಿಯ ಕೃಷಿ ವಿದ್ಯಾರ್ಥಿಗಳು ಮತ್ತು ಯುವಕರಿಗೆ ಉದ್ಯೋಗ, ಸ್ವ ಉದ್ಯೋಗ ಮತ್ತು ತಂತ್ರಜ್ಞಾನ ಜ್ಞಾನ ನೀಡುವ ಮಹತ್ವದ ಹೆಜ್ಜೆಯಾಗಿದೆ. ಕೃಷಿ ಕ್ಷೇತ್ರದಲ್ಲಿ ಮುಂದಿನ ದಿನಗಳಲ್ಲಿ ಡ್ರೋನ್ ತಂತ್ರಜ್ಞಾನಕ್ಕೆ ದೊಡ್ಡ ಭವಿಷ್ಯ ಇರುವುದರಿಂದ, ಅರ್ಹ ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು.

ಡ್ರೋನ್ ತಂತ್ರಜ್ಞಾನ ಮತ್ತು ಕೃಷಿ ಕ್ಷೇತ್ರದ ಭವಿಷ್ಯ

ಇಂದಿನ ಆಧುನಿಕ ಕೃಷಿಯಲ್ಲಿ ಡ್ರೋನ್ ತಂತ್ರಜ್ಞಾನವು ಕ್ರಾಂತಿಕಾರಿ ಬದಲಾವಣೆ ತಂದಿದೆ. ಹಿಂದೆ ರೈತರು ಕೈಯಾರೆ ಸಿಂಪಡಣೆ ಮಾಡುತ್ತಿದ್ದರು ತಮ್ಮ ಹೊಲಕ್ಕೆ , ಪರಿಶೀಲನೆ ಮತ್ತು ಸಮೀಕ್ಷೆ ಮಾಡಬೇಕಾಗಿತ್ತು. ಇದಕ್ಕೆ ಹೆಚ್ಚು ಸಮಯ ಮತ್ತು ಶ್ರಮ ಬೇಕಾಗುತ್ತಿತ್ತು. ಆದರೆ ಡ್ರೋನ್ ಬಳಕೆಯಿಂದ ಕಡಿಮೆ ಸಮಯದಲ್ಲಿ, ಕಡಿಮೆ ವೆಚ್ಚದಲ್ಲಿ ಮತ್ತು ಹೆಚ್ಚು ನಿಖರವಾಗಿ ಕೆಲಸ ಮಾಡಬಹುದು. ವಿಶೇಷವಾಗಿ ದೊಡ್ಡ ಜಮೀನು ಹೊಂದಿರುವ ರೈತರಿಗೆ ಡ್ರೋನ್ ಬಹಳ ಉಪಯುಕ್ತವಾಗಿದೆ.

ಡ್ರೋನ್ ಮೂಲಕ ಬೆಳೆಗಳ ಮೇಲೆ ಕೀ ಸಂಪೂರ್ಣ ಮಾಹಿತಿ ಸಂಗ್ರಹಿಸಬಹುದು. ಯಾವ ಬೆಳೆ ಆರೋಗ್ಯಕರವಾಗಿದೆ, ಎಲ್ಲಿ ಕೀಟ ದಾಳಿ ಆಗಿದೆ, ಎಲ್ಲಿ ನೀರಿನ ಕೊರತೆ ಇದೆ ಎಂಬುದನ್ನು ಡ್ರೋನ್ ಕ್ಯಾಮರಾ ಮತ್ತು ಸೆನ್ಸರ್‌ಗಳ ಮೂಲಕ ತಿಳಿಯಬಹುದು. ಇದರಿಂದ ರೈತರು ಅಗತ್ಯವಿರುವ ಭಾಗಕ್ಕೆ ಮಾತ್ರ ಸಿಂಪಡಣೆ ಮಾಡಬಹುದು. ಇದನ್ನು ಪ್ರಿಸಿಷನ್ ಅಗ್ರಿಕಲ್ಚರ್ ಎಂದು ಕರೆಯಲಾಗುತ್ತದೆ. ಈ ವಿಧಾನದಿಂದ ರಸಗೊಬ್ಬರ ಮತ್ತು ಕೀಟನಾಶಕಗಳ ಬಳಕೆ ಕಡಿಮೆಯಾಗುತ್ತದೆ.

ಉದ್ಯೋಗ ಮತ್ತು ಸ್ವ ಉದ್ಯೋಗ ಅವಕಾಶಗಳು

Advanced ಡ್ರೋನ್ ತರಬೇತಿ ಪಡೆದ ಅಭ್ಯರ್ಥಿಗಳಿಗೆ ಹಲವಾರು ಉದ್ಯೋಗ ಅವಕಾಶಗಳು ದೊರೆಯುತ್ತವೆ. ಸರ್ಕಾರ ಮತ್ತು ಖಾಸಗಿ ಸಂಸ್ಥೆಗಳು ಡ್ರೋನ್ ಪೈಲಟ್, ಡ್ರೋನ್ ಆಪರೇಟರ್, ಡ್ರೋನ್ ಟೆಕ್ನೀಷಿಯನ್‌ಗಳಿಗೆ ಹೆಚ್ಚಿನ ಬೇಡಿಕೆ ಇಟ್ಟುಕೊಂಡಿವೆ. ಕೃಷಿ ಇಲಾಖೆಗಳು, ಕೃಷಿ ವಿಜ್ಞಾನ ಕೇಂದ್ರಗಳು, ಬೀಜ ಮತ್ತು ರಸಗೊಬ್ಬರ ಕಂಪನಿಗಳು ಡ್ರೋನ್ ಸೇವೆ ಬಳಸುತ್ತಿವೆ.

ಇದರ ಜೊತೆಗೆ ಸ್ವ ಉದ್ಯೋಗವೂ ಸಾಧ್ಯ. ತರಬೇತಿ ಪಡೆದ ಯುವಕರು ತಮ್ಮದೇ ಡ್ರೋನ್ ಸೇವಾ ಕೇಂದ್ರ ಆರಂಭಿಸಬಹುದು. ರೈತರಿಗೆ ಬೆಳೆ ಸಿಂಪಡಣೆ, ಮ್ಯಾಪಿಂಗ್, ಸರ್ವೇ ಸೇವೆಗಳನ್ನು ಶುಲ್ಕ ಪಡೆದು ಒದಗಿಸಬಹುದು. ಇದು ಗ್ರಾಮೀಣ ಯುವಕರಿಗೆ ಉತ್ತಮ ಆದಾಯದ ಮೂಲವಾಗಬಹುದು.

ರೈತರಿಗೆ ಆಗುವ ಲಾಭ

ಡ್ರೋನ್ ಬಳಕೆಯಿಂದ ರೈತರಿಗೆ ಹಲವು ಲಾಭಗಳಿವೆ. ಸಿಂಪಡಣೆ ಮಾಡುವಾಗ ರೈತರು ನೇರವಾಗಿ ವಿಷಕಾರಿ ರಾಸಾಯನಿಕಗಳಿಗೆ ಸ್ಪರ್ಶವಾಗುವುದಿಲ್ಲ. ಇದರಿಂದ ಆರೋಗ್ಯ ಸಮಸ್ಯೆಗಳು ಕಡಿಮೆಯಾಗುತ್ತವೆ. ಡ್ರೋನ್ ಮೂಲಕ ಸಮಾನ ಪ್ರಮಾಣದಲ್ಲಿ ಸಿಂಪಡಣೆ ಆಗುವುದರಿಂದ ಬೆಳೆಗಳಿಗೆ ಹಾನಿಯಾಗುವುದಿಲ್ಲ.ಇದೇ ರೀತಿಯಾಗಿ ಬೆಳೆ ನಷ್ಟದ ಅಂದಾಜು, ವಿಮಾ ಸಮೀಕ್ಷೆ, ಬೆಳೆ ಉತ್ಪಾದನೆಯ ಅಂದಾಜು ಮುಂತಾದ ಕೆಲಸಗಳಿಗೆ ಡ್ರೋನ್ ಬಳಸಬಹುದು. ಸರ್ಕಾರದ ಕೃಷಿ ಯೋಜನೆಗಳ ಅನುಷ್ಠಾನದಲ್ಲೂ ಡ್ರೋನ್ ಪ್ರಮುಖ ಪಾತ್ರ ವಹಿಸುತ್ತಿದೆ.

ಸಮಾಜ ಕಲ್ಯಾಣ ಇಲಾಖೆಯ ಪಾತ್ರ

ಸಮಾಜ ಕಲ್ಯಾಣ ಇಲಾಖೆ ಪರಿಶಿಷ್ಟ ಜಾತಿಯ ಯುವಕರ ಶೈಕ್ಷಣಿಕ ಮತ್ತು ಆರ್ಥಿಕ ಅಭಿವೃದ್ಧಿಗೆ ಹಲವು ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಈ Advanced ಡ್ರೋನ್ ತರಬೇತಿ ಕಾರ್ಯಕ್ರಮವು ಕೇವಲ ತರಬೇತಿ ಮಾತ್ರವಲ್ಲ, ಭವಿಷ್ಯದ ಬದುಕಿಗೆ ದಾರಿ ತೋರಿಸುವ ಯೋಜನೆಯಾಗಿದೆ. ತಂತ್ರಜ್ಞಾನ ಆಧಾರಿತ ಕೌಶಲ್ಯ ಕಲಿಸುವ ಮೂಲಕ ಯುವಕರಿಗೆ ಸ್ವಾವಲಂಬನೆ ನೀಡುವುದು ಇದರ ಉದ್ದೇಶವಾಗಿದೆ.

ಕೃಷಿ ಕ್ಷೇತ್ರದಲ್ಲಿ ಡ್ರೋನ್ ತಂತ್ರಜ್ಞಾನಕ್ಕೆ ಮುಂದಿನ ದಿನಗಳಲ್ಲಿ ಇನ್ನಷ್ಟು ಬೇಡಿಕೆ ಹೆಚ್ಚಾಗಲಿದೆ. ಇಂತಹ ಸಮಯದಲ್ಲಿ ಕರ್ನಾಟಕ ಸರ್ಕಾರ ನೀಡುತ್ತಿರುವ ಈ ಉಚಿತ Advanced ಡ್ರೋನ್ ತರಬೇತಿ ಪರಿಶಿಷ್ಟ ಜಾತಿಯ ಯುವಕರಿಗೆ ವರದಾನವಾಗಿದೆ. ಅರ್ಹ ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ತಮ್ಮ ಜೀವನದಲ್ಲಿ ಹೊಸ ದಾರಿಯನ್ನು ತೆರೆದುಕೊಳ್ಳಬೇಕು. ಈಗಲೆ ತಡಮಾಡದೆ ಪರಶಿಷ್ಟ ಜಾತಿಯ ಅರ್ಹತೆ ಏರುವ ಅಭ್ಯರ್ಥಿಗಳು ಈಗಲೆ ನಮ್ಮ ವೆಬ್ಸೈಟ್ ನಲ್ಲಿ ಮೇಲೆ ಕೊಡಲಾದ ಅಪ್ಲೈ ಆಪ್ಷನ್ ಮೇಲೆ ಕ್ಲಿಕ್ ಮಾಡಿ ತಡಮಾಡದೆ ಅರ್ಜಿ ಸಲ್ಲಿಸಿ ಏಕೆಂದರೆ ಕಡಿಮೆ ಪ್ರಮಾಣದ ಸೀಟ್ ಲಬ್ಯ ಇವೆ.

 

Leave a Comment